ಕರ್ನಾಟಕ

karnataka

ETV Bharat / city

ಮೊಹರಂ ಹಬ್ಬ ಸಂಪೂರ್ಣ ಹಿಂದೂಗಳಿಂದ ಆಚರಣೆ.. ಭಾವೈಕ್ಯತೆ ಮೆರೆದ ಗಣಿನಾಡ ಜನ.. - Bellary district latest news

ಹಿಂದೂ ಧರ್ಮದ ಗೌಳೇರ ಜನಾಂಗರದವರು ಮೊಹರಂ ಆಚರಣೆ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಇಲ್ಲಿ ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರೂ ಒಂದಾಗಿ ಸಂಭ್ರಮಾಚರಣೆಯಲ್ಲಿ ತೊಡಗುವುದು ವಿಶೇಷವಾಗಿದೆ.

ಮೊಹರಂ ಹಬ್ಬ ಆಚರಣೆ

By

Published : Sep 8, 2019, 10:17 AM IST

Updated : Sep 8, 2019, 11:21 AM IST

ಬಳ್ಳಾರಿ : ಸಾಮಾನ್ಯವಾಗಿ ಮುಸ್ಲಿಂ ಜನಾಂಗವೇ ಮೊಹರಂ ಆಚರಣೆ ಮಾಡುವುದನ್ನ ನಾವು ಕಾಣುತ್ತೇವೆ. ಆದರೆ, ಗಣಿನಾಡಿನಲ್ಲಿ ಮಾತ್ರ ಹಿಂದೂ ಧರ್ಮದ ಗೌಳೇರ ಜನಾಂಗರದವರು ಮೊಹರಂ ಆಚರಣೆ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಇಲ್ಲಿ ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರೂ ಒಂದಾಗಿ ಸಂಭ್ರಮಾಚರಣೆಯಲ್ಲಿ ತೊಡಗುವುದು ವಿಶೇಷವಾಗಿದೆ.

ಜಿಲ್ಲೆಯ ಗೌಳೇರಹಟ್ಟಿಯಲ್ಲಿ ಮೊಹರಂ ಹಬ್ಬವನ್ನು ಸಂಪೂರ್ಣವಾಗಿ ಹಿಂದೂಗಳು ಆಚರಿಸುತ್ತಾ ಬಂದಿದ್ದಾರೆ. ಇಲ್ಲಿ ಮುಸ್ಲಿಂ ಪೀರಲ ದೇವರನ್ನು ಎತ್ತುಕೊಳ್ಳುವವರು ಮತ್ತು ಪೂಜೆ ಮಾಡುವವರೇ ಗೌಳೇರ ಸಮುದಾಯದವರು. ಈ ಮೊಹರಂ ಹಬ್ಬ ಆಚರಣೆಯಲ್ಲಿ ಊರಿನ ಹಿಂದೂ ಸಮುದಾಯದ ನಾಗರಾಜ್, ಲೋಕೇಶ್, ಈಶ ಎಂಬುವ ಮೂವರು ಪೀರಲ ದೇವರನ್ನು ಹೊರುವ ಪದ್ಧತಿ ಸಹ ಇದೆ.

ಮೊಹರಂ ಹಬ್ಬ ಸಂಪೂರ್ಣ ಹಿಂದೂಗಳಿಂದ ಆಚರಣೆ

ನಿನ್ನೆ ಮೊಹರಂನ ಏಳನೇ ಕಣವಾಗಿದ್ದರಿಂದ ಸಂಜೆ ಇಂದಲೇ ಕಾರ್ಯಕ್ರಮಗಳು ಆರಂಭವಾಗಿದ್ದವು. ಪೀರಲ ದೇವರು ಸಂಜೆ ಗೌಳೇರಹಟ್ಟಿಯಿಂದ ಎದ್ದು ನಗರದ ಮೋತಿ, ಕೌಲ್ ಬಜಾರ್, ಬಂಡಿಹಟ್ಟಿ, ರೇಡಿಯೋ ಪಾರ್ಕ್ ಇನ್ನಿತರ ಸ್ಥಳಗಳಲ್ಲಿನ ಇತರ ಪೀರಲ ದೇವರ ದರ್ಶನ ಪಡೆದು ನಂತರ ಮಧ್ಯರಾತ್ರಿ ಎರಡು ಗಂಟೆಗೆ ದೇವಸ್ಥಾನಕ್ಕೆ ಆಗಮಿಸುತ್ತವೆ ಮತ್ತು ಒಂಬತ್ತನೇ ಕಣದಲ್ಲಿ ಅಂದ್ರೇ ಇವತ್ತು ಬೆಂಕಿ ತುಳಿಯುವ ಕಾರ್ಯ ನಡೆಯುತ್ತದೆ. ಈ‌ ಸಮಯದಲ್ಲಿ ನೂರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆಯುತ್ತಾರೆ.

Last Updated : Sep 8, 2019, 11:21 AM IST

ABOUT THE AUTHOR

...view details