ಕರ್ನಾಟಕ

karnataka

ETV Bharat / city

ಕೂಡ್ಲಿಗಿಯಲ್ಲಿ ಭಾರೀ ಮಳೆ: ಪ್ರಾಣವನ್ನೇ ಪಣಕಿಟ್ಟು ಹಸು ರಕ್ಷಿಸಿದ ರೈತ - ರೈತ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಭಾರೀ ಪ್ರಮಾಣದ ಮಳೆ ಸುರಿದಿದ್ದು, ಹಳ್ಳ ಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಈ ನಡುವೆ ರೈತನೋರ್ವ ತನ್ನ ಪ್ರಾಣವನ್ನೇ ಪಣಕಿಟ್ಟು ಹಸುವನ್ನು ರಕ್ಷಿಸಿರುವ ಘಟನೆಯೊಂದು ನಡೆದಿದೆ.

ಕೂಡ್ಲಿಗಿಯಲ್ಲಿ ಭಾರೀ ಮಳೆ

By

Published : Oct 4, 2019, 5:47 PM IST

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಭಾರೀ ಪ್ರಮಾಣದ ಮಳೆ ಸುರಿದಿದ್ದು, ಹಳ್ಳ ಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಈ ನಡುವೆ ರೈತನೋರ್ವ ತನ್ನ ಪ್ರಾಣವನ್ನೇ ಪಣಕಿಟ್ಟು ಹಸುವನ್ನು ರಕ್ಷಿಸಿರುವ ಘಟನೆಯೊಂದು ನಡೆದಿದೆ.

ಕೂಡ್ಲಿಗಿಯಲ್ಲಿ ಭಾರೀ ಮಳೆ

ಕೂಡ್ಲಿಗಿಯ ಪಟ್ಟಣದಲ್ಲಿ ನಿನ್ನೆ ಗುಡುಗು ಸಹಿತ ಭಾರೀ ಮಳೆಯಾದ ಗ್ರಾಮದ ಉಜ್ಜನಿಯ ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳ ದಾಟುವಾಗ ಹಸುವೊಂದು ನೀರಿನ ರಭಸಕ್ಕೆ ತೇಲಿ ಹೋಗುತ್ತಿತ್ತು. ಇದನ್ನು ಕಂಡ ರೈತ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹಸುವನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಿನ್ನೆ ಕೂಡ್ಲಿಗಿಯ ಪಟ್ಟಣದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾದ ಕಾರಣ ಪಟ್ಟಣದ ಅಕ್ಕಪಕ್ಕದ ಹಳ್ಳ ಕೊಳ್ಳಗಳು ತುಂಬಿ ಹರಿದು, ಅನೇಕ ಮನೆಗಳಿಗೂ ಕೂಡ ಈ ಮಳೆಯ ನೀರು ನುಗ್ಗಿವೆ. ಈ ಮಳೆಯ ರಭಸಕ್ಕೆ ಸೊಲ್ಲಮ್ಮ ದೇವಿಯ ದೇಗುಲದ ಬಳಿ ಇರುವ ತೆಂಗಿನ ಮರವೊಂದು ಮುರಿದು ಬಿದ್ದಿದ್ದು, ಮೂರು ಮನೆಗಳು ಜಖಂಗೊಂಡಿವೆ. ಗ್ರಾಮದ ಗೌಡ್ರು ಭೋಜರಾಜ ಎಂಬುವವರ ಮನೆಯ ಬಳಿ ತೆಂಗಿನ ಮರ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದು, ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಹೊಸಹಳ್ಳಿ ರಸ್ತೆಯ ಪಕ್ಕದ ಮನೆಗಳಿಗೆ ನುಗ್ಗಿದ ನೀರು:
ಉಜ್ಜನಿಯ ಹಳ್ಳ ತುಂಬಿ ಹರಿದಿದ್ದರಿಂದ ಹೊಸಹಳ್ಳಿ ರಸ್ತೆಯ ಪಕ್ಕದಲ್ಲಿನ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಕೊಟ್ಟೂರು ರಸ್ತೆಯ ಬಳಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ 20ಕ್ಕೂ ಅಧಿಕ ಮನೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.

ಕೂಡ್ಲಿಗಿ–ಕೊಟ್ಟೂರು ನಡುವೆ ಮಲ್ಲನಾಯಕನಹಳ್ಳಿ ಬಳಿ ಹಳ್ಳ ತುಂಬಿ ಹರಿದು ಸುಮಾರು ಒಂದು ತಾಸು ಸಂಚಾರ ಸ್ಥಗಿತಗೊಂಡಿತ್ತು. ತಾಲೂಕಿನ ಮೊರಬ ಗ್ರಾಮ ಹೊರವಲಯದಲ್ಲಿ ಕೆಸರು ಗದ್ದೆಯಂತಾಗಿದ್ದು, ರಸ್ತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​ ಸಿಲುಕಿ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು.

ABOUT THE AUTHOR

...view details