ಕರ್ನಾಟಕ

karnataka

ETV Bharat / city

ಬಳ್ಳಾರಿಯಲ್ಲಿ ಆರ್ಭಟಿಸಿದ ವರುಣ... ಮಳೆಯಿಂದ ರಸ್ತೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ - bellary rain news

ಬಳ್ಳಾರಿಯಲ್ಲಿಂದು ವರುಣ ಆರ್ಭಟಿಸಿದ್ದಾನೆ. ಬೆಳಗ್ಗೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಹಲವು ಸೇತುವೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಗಣಿನಗರಿಯಲ್ಲಿ ಧಾರಾಕಾರ ಮಳೆ...ಜನಜೀವನ ಅಸ್ತವ್ಯಸ್ತ

By

Published : Sep 19, 2019, 6:49 PM IST

Updated : Sep 19, 2019, 9:29 PM IST

ಬಳ್ಳಾರಿ: ಗಣಿನಗರಿ ಬಳ್ಳಾರಿಯಲ್ಲಿಂದು ಬೆಳಗ್ಗೆಯಿಂದ ವರುಣನ ಆರ್ಭಟ ಜೋರಾಗಿದೆ. ಮಳೆಯಿಂದಾಗಿ ಹಲವು ಸೇತುವೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಬಳ್ಳಾರಿಯಲ್ಲಿ ಆರ್ಭಟಿಸಿದ ವರುಣ... ಮಳೆಯಿಂದ ರಸ್ತೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಸಾಂಖ್ಯಿಕ ಇಲಾಖೆ ಕಚೇರಿಗೆ ನೀರು ನುಗ್ಗಿದ್ದು, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಅನುಮತಿ ಮೇರೆಗೆ ಕಚೇರಿಯ ಸಿಬ್ಬಂದಿಗೆ ಮೇಲಾಧಿಕಾರಿ ಮಧ್ಯಾಹ್ನದ ರಜೆ ಘೋಷಿಸಿದರು.

ನಗರದ ರಾಯಲ್ ಕಾಲೊನಿಯಲ್ಲಿ ಗುಡಿಸಲು ಮನೆಗಳಿಗೆ ಮಳೆ ನೀರು ನುಗ್ಗಿದೆ. ಗುಡಿಸಲು ನಿವಾಸಿಗಳು ತಗ್ಗು ಪ್ರದೇಶದಲ್ಲಿ ವಾಸವಿವಿರುವುದರಿಂದ ಕೂರಲು, ನಿಲ್ಲಲು ‌ಕೂಡ ಜಾಗ ಇಲ್ಲದಂತಾಗಿದೆ. ಮಳೆ ನೀರಿನ ಜೊತೆ ಒಳಚರಂಡಿ‌ ನೀರು ಮಿಶ್ರಿತಗೊಂಡ ಪರಿಣಾಮ ಕಾಲೊನಿಗಳ ತುಂಬೆಲ್ಲ ದುರ್ವಾಸನೆ ಹಬ್ಬಿದೆ. ಪ್ರತಿಬಾರಿ ಮಳೆ ಸುರಿದಾಗಲೂ ಇಲ್ಲಿನ ನಿವಾಸಿಗಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಸೇತುವೆಗಳು ಜಲಾವೃತ.. ವಾಹನ ಸಂಚಾರ ಬಂದ್

ನಗರದ ಕನಕ ದುರ್ಗಮ್ಮ ದೇಗುಲ ರಸ್ತೆಯ ಕೆಳಸೇತುವೆ, ಸತ್ಯನಾರಾಯಣ ಪೇಟೆ ಕೆಳಸೇತುವೆ ಹಾಗೂ ಡಾ. ಜೋಳದರಾಶಿ ದೊಡ್ಡನಗೌಡ ರಂಗ ಮಂದಿರ ರಸ್ತೆಯ ಕೆಳಸೇತುವೆ ಮಳೆಯಿಂದಾಗಿ ಜಲಾವೃತಗೊಂಡಿವೆ. ಎಸ್ಪಿ ವೃತ್ತದಿಂದ ಕನಕ ದುರ್ಗಮ್ಮ ದೇಗುಲ ರಸ್ತೆಯ ಮಾರ್ಗ, ಗಾಂಧಿನಗರದಿಂದ ಸತ್ಯನಾರಾಯಣ ಪೇಟೆ ಕೆಳಸೇತುವೆ ರಸ್ತೆ ಮಾರ್ಗ ಮತ್ತು ಖಾಸಗಿ ಬಸ್ ನಿಲ್ದಾಣದ ರಸ್ತೆಯ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ನಗರದ ಬಹುತೇಕ ಖಾಸಗಿ ಸಂಸ್ಥೆಗಳ ಕಚೇರಿಗಳು ಹಾಗೂ ಅಂಗಡಿ ಮುಂಗಟ್ಟುಗಗಳನ್ನ ಮಳೆ ಕಾರಣಕ್ಕೆ ಬಂದ್​ ಮಾಡಲಾಗಿತ್ತು.

ಬಳ್ಳಾರಿ ನಗರದಲ್ಲಿ 60 ಮಿ.ಮೀಟರ್​, ಹಡಗಲಿಯಲ್ಲಿ 30.6, ಹಗರಿಬೊಮ್ಮನಹಳ್ಳಿಯಲ್ಲಿ 59.4, ಹೊಸಪೇಟೆಯಲ್ಲಿ 34.0, ಕೂಡ್ಲಿಗಿಯಲ್ಲಿ 38.9, ಸಂಡೂರಿನಲ್ಲಿ ಶೇ. 92.8, ಸಿರುಗುಪ್ಪದಲ್ಲಿ 62.8, ಹರಪನಹಳ್ಳಿಯಲ್ಲಿ 21.6 ಮಿಲಿ ಮೀಟರ್ ನಷ್ಟು ಮಳೆ ದಾಖಲಾಗಿದೆ.

Last Updated : Sep 19, 2019, 9:29 PM IST

ABOUT THE AUTHOR

...view details