ಕರ್ನಾಟಕ

karnataka

ETV Bharat / city

ಬಳ್ಳಾರಿಯಲ್ಲಿ ಕಾದ ಕಬ್ಬಿಣದಂತಾಗಿದ್ದ ಧರೆಯನ್ನ ತಂಪಾಗಿಸಿದ ವರುಣ - undefined

ಬಳ್ಳಾರಿಯ ಜನತೆಗೆ ಇಂದು ವರುಣನ ದರ್ಶನವಾಗಿದೆ. ಸಂಜೆ ವೇಳೆ ಸುರಿದ ಭಾರಿ ಮಳೆಗೆ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನಗರ ಸೇರಿದಂತೆ ಬಳ್ಳಾರಿ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲೂ ವರುಣ ಅರ್ಭಟಿಸಿದ್ದಾನೆ.

ಬಳ್ಳಾರಿಯ ಜನತೆಗೆ ಇಂದು ವರುಣನ ದರ್ಶನ

By

Published : Apr 29, 2019, 11:43 PM IST

ಬಳ್ಳಾರಿ: ಗಣಿ ಜಿಲ್ಲೆಯಲ್ಲಿಂದು ಸಂಜೆ ಗುಡುಗು, ಬಿರುಗಾಳಿ ಸಹಿತ‌ ಮಳೆ ಸುರಿದಿದೆ. ಬಿಸಿಲಿನ ನಡುವೆ ತಂಪೆರೆದ ಮಳೆರಾಯನ ನೋಡಿ ಜನ ಸಂತಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಮತ್ತು ಒಣ ಹವೆ ಇತ್ತು. ಬಳಿಕ ಮಧ್ಯಾಹ್ನದ ವೇಳೆ ಬಿರುಬಿಸಿಲಿನ ಝಳ‌ವೂ ಹೆಚ್ಚಾಗಿತ್ತು. ಸಂಜೆ ಹೊತ್ತಿಗೆ ಮೋಡ ಕವಿದ ವಾತಾವರಣಕ್ಕೆ ತಿರುಗಿ, ಬಿರುಗಾಳಿ, ಗುಡುಗು, ಮಿಂಚಿನ ಅರ್ಭಟ ಜೋರಾಗಿಯೇ ಸದ್ದು ಮಾಡಿತು.

ಬಳ್ಳಾರಿಯ ಜನತೆಗೆ ಇಂದು ವರುಣನ ದರ್ಶನ

ಭೂಮಿಯನ್ನು ತಂಪಾಗಿಸಿದ ಮಳೆ...

ಬಿರುಗಾಳಿ ಸಹಿತ ಜಿಟಿಜಿಟಿ ಹನಿಯಿಂದ ಶುರುವಾಗಿದ್ದ ಮಳೆಯು ಕೆಲಹೊತ್ತು ಆರ್ಭಟಿಸಿತು. ಮಳೆ ಬರುತ್ತಿದ್ದಂತೆಯೇ ಸಾರ್ವಜನಿಕ ಸಂಚಾರಕ್ಕೆ ಕೆಲಕಾಲ ಅಡ್ಡಿಯುಂಟಾಗಿತ್ತು.‌ ಸುಮಾರು ಅರ್ಧ ಗಂಟೆ ಕಾಲ ಮಳೆ ಸುರಿಯಿತು. ಬಳ್ಳಾರಿ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲೂ ಮಳೆಯಾಗಿದೆ.

For All Latest Updates

TAGGED:

ABOUT THE AUTHOR

...view details