ಬಳ್ಳಾರಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಿರುಗುಪ್ಪ ತಾಲೂಕಿನ ನಾಡಂಗ್ ಗ್ರಾಮದಲ್ಲಿ ಗರ್ಜಿ ಹಳ್ಳ ತುಂಬಿ ರೈತರ ಜಮೀನಿನ ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಜಮೀನಿಗೆ ನುಗ್ಗಿದ ನೀರು: ಅಪಾರ ಪ್ರಮಾಣ ಬೆಳೆ ನಷ್ಟ, ಪರಿಹಾರಕ್ಕೆ ರೈತರ ಆಗ್ರಹ - ನೆರ ಭೀತಿ
ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಿರುಗುಪ್ಪ ತಾಲೂಕಿನ ನಾಡಂಗ್ ಗ್ರಾಮದಲ್ಲಿ ಗರ್ಜಿ ಹಳ್ಳ ತುಂಬಿ ಹರಿಯುತ್ತಿದ್ದು, ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

heavy-rain-in-ballary
ಜಮೀನಿನಲ್ಲಿ ನಿಂತ ನೀರು
25 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಒಂದು ಎಕರೆ ಮೆಣಸಿನಕಾಯಿಗೆ ₹ 30 ಸಾವಿರ, ಹತ್ತಿ ಬೆಳೆಗೆ ಎಕರೆಗೆ ₹ 18 ಸಾವಿರ, ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ₹ 2 ಸಾವಿರ ರೈತ ಖರ್ಚು ಮಾಡಿದ್ದಾನೆ. ಆದರೆ, ಮಳೆಯಿಂದಾಗಿ ಸಂಪೂರ್ಣ ನಷ್ಟವಾಗಿದೆ. ಅದಕ್ಕೆ ತಕ್ಕ ಪರಿಹಾರವನ್ನು ಸರ್ಕಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ ರೈತರು ತಮ್ಮ ಬೆಳೆಗಳು ಮಳೆಯಿಂದಾಗಿ ಹಾಳಾಗಿವೆ. ವೈಜ್ಞಾನಿಕ ಅಧ್ಯಯನ ಮಾಡಿ ಸರಿಯಾದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.