ಕರ್ನಾಟಕ

karnataka

ETV Bharat / city

ಬಂಗಾರದ ಅಂಗಡಿಯಲ್ಲಿ ಕಳ್ಳತನ: ಬರೋಬ್ಬರಿ 33 ಲಕ್ಷಕ್ಕೂ ಹೆಚ್ಚು ಮೊತ್ತದ ಆಭರಣ ಕಳವು - ಬಳ್ಳಾರಿಯ ಸಂಡೂರು ಪಟ್ಟಣ

ಬಳ್ಳಾರಿಯ ಸಂಡೂರು ಪಟ್ಟಣದ ಬಂಗಾರದ ಅಂಗಡಿಯೊಂದರಲ್ಲಿ ಹಾಡಹಗಲೇ ಮೂವತ್ತು ಲಕ್ಷಕ್ಕೂ ಹೆಚ್ಚು ಮೊತ್ತದ ಬಂಗಾರದ ಆಭರಣ ಕಳ್ಳತನ ಮಾಡಲಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕಳ್ಳತನ
ಕಳ್ಳತನ

By

Published : May 14, 2022, 10:27 AM IST

ಬಳ್ಳಾರಿ: ಮುಖಕ್ಕೆ ಮಾಸ್ಕ್​ ಧರಿಸಿಕೊಂಡು ಬಂಗಾರದ ಅಂಗಡಿಯೊಳಗೆ ನುಗ್ಗಿದ ಮೂವರು ಖದೀಮರು ಹಾಡಹಗಲೇ ಸುಮಾರು 33 ಲಕ್ಷ ರೂ. ಮೌಲ್ಯದ 850 ಗ್ರಾಂ ತೂಕದ ಬಂಗಾರದ ಆಭರಣಗಳಿದ್ದ ಬ್ಯಾಗ್ ಕಳವು ಮಾಡಿಕೊಂಡು ಪರಾರಿಯಾದ ಘಟನೆ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

ಸಾಮಾನ್ಯ ಗ್ರಾಹಕರಂತೆ ಬಂಗಾರದ ಅಂಗಡಿಗೆ ಕಳ್ಳರು ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ಮೆಹಬೂಬ ಬಾಷಾ ಒಂದು ಬಾಗಿಲಿನ ಬೀಗ ತೆಗೆದು ಚಿನ್ನವಿದ್ದ ಚೀಲವನ್ನ ಶಾಪ್​ ಒಳಗಿಟ್ಟಿದ್ದಾರೆ. ನಂತರ ಇನ್ನೊಂದು ಬಾಗಿಲು ತೆಗೆಯುವ ವೇಳೆ ಕ್ಷಣಾರ್ಧದಲ್ಲಿ ಖದೀಮ ಬ್ಯಾಗ್​ಅನ್ನು ಎಗರಿಸಿಕೊಂಡು ದ್ವಿಚಕ್ರದಲ್ಲಿ ಪರಾರಿಯಾಗಿದ್ದಾರೆ.

ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯಾಗ್‌ನಲ್ಲಿ 850 ಗ್ರಾಂ ಬಂಗಾರವಿದ್ದು, 32,54,000 ಮೌಲ್ಯ ಆಗುತ್ತದೆ ಎಂದು ಹೇಳಲಾಗ್ತಿದೆ. ಈ ಕುರಿತು ಚಿನ್ನದಂಗಡಿ ಮಾಲೀಕ ಮೆಹಬೂಬ ಬಾಷಾ ಸಂಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಆ್ಯಸಿಡ್ ದಾಳಿ ಕೇಸ್: ಮೂತ್ರ ವಿಸರ್ಜನೆ ನೆಪದಲ್ಲಿ ತಪ್ಪಿಸಿಕೊಳ್ಳುತ್ತಿದ್ದ ನಾಗನಿಗೆ ಪೊಲೀಸರಿಂದ ಗುಂಡೇಟು

ABOUT THE AUTHOR

...view details