ವಿಜಯನಗರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಮಧ್ಯರಾತ್ರಿ ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ನಾಲ್ವರು ದುರ್ಮರಣ ಏನಿದು ಘಟನೆ? :ಮರಿಯಮ್ಮನಹಳ್ಳಿ 5ನೇ ವಾರ್ಡಿನಲ್ಲಿರುವ ಶ್ರೀ ರಾಘವೇಂದ್ರ ಶೆಟ್ಟಿ ಅವರ ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಎಲ್ಲರೂ ಮನೆಯಲ್ಲಿ ಮಲಗಿದ್ದು, ಬೆಂಕಿ ಶಾಖಕ್ಕೆ ರಾಘವೇಂದ್ರ ಶೆಟ್ಟಿ ಮತ್ತು ಆತನ ಪತ್ನಿ ರಾಜೇಶ್ವರಿ ಗಾಬರಿಯಿಂದ ಮನೆಯಿಂದ ಹೊರ ಓಡಿ ಬಂದಿದ್ದಾರೆ.
ಓದಿ:ಅಪ್ಪಾ ಬೇಡಪ್ಪ.. ಪ್ಲೀಸ್ ಬೇಡಪ್ಪ ಅಂತಾ ಗೋಗರೆದ್ರೂ ಕರಗದ ಮನಸ್ಸು.. ಮಗನಿಗೆ ಬೆಂಕಿ ಹಚ್ಚಿ ತಂದೆ ಕ್ರೌರ್ಯ!
ಗಂಡ-ಹೆಂಡತಿ ಹೊರ ಬರುತ್ತಿದ್ದಂತೆ ಬೆಂಕಿ ಸಂಪೂರ್ಣ ಮನೆಗೆ ಆವರಿಸಿಕೊಂಡಿದೆ. ಆದ್ರೆ, ಮೇಲ್ಮನೆಯ ಬೆಡ್ ರೂಂನಲ್ಲಿ ಮಲಗಿದ್ದ ತನ್ನ ತಂದೆ-ತಾಯಿ ಮತ್ತು ಮಕ್ಕಳ್ಳಿಬ್ಬರನ್ನು ಕಾಪಾಡಲು ಎಷ್ಟೇ ಪ್ರಯತ್ನ ಪಟ್ಟರು ಸಹ ರಾಘವೇಂದ್ರ ಶೆಟ್ಟಿಗೆ ಸಾಧ್ಯವಾಗಲಿಲ್ಲ. ಕೂಡಲೇ ಅಗ್ನಿ ಶಾಮಕ ಇಲಾಖೆಗೆ ಮಾಹಿತಿ ರವಾನಿಸಿದರು. ಅಷ್ಟೊತ್ತಿಗಾಗಲೇ ಬೆಂಕಿಯ ಕೆನ್ನಾಲೆಗೆಗೆ ನಾಲ್ವರು ಸಾವನ್ನಪ್ಪಿದ್ದರು.
ಮೃತ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಗಣ್ಯರು ಮೃತರು ರಾಘವೇಂದ್ರ ಶೆಟ್ಟಿ ಮಗ ಡಿ.ವೆಂಕಟ್ ಪ್ರಶಾಂತ್ ( 42) ಮತ್ತು ಆತನ ಹೆಂಡತಿ ಡಿ ಚಂದ್ರಕಲಾ (38) ಹಾಗೂ ಅವರ ಮಕ್ಕಳಾದ ಹೆಚ್ ಎ ಅರ್ದ್ವಿಕ್ (16) ಹಾಗೂ ಪ್ರೇರಣಾ (8) ಎಂದು ಗುರುತಿಸಲಾಗಿದೆ. ಮನೆಯಿಂದ ಹೊರಗಡೆ ಬರಲಿಕ್ಕೆ ಸಾಧ್ಯವಾಗದೇ ಉಸಿರುಗಟ್ಟಿ ಮತ್ತು ಸುಟ್ಟಗಾಯದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಓದಿ:ಇಲಿ ಆಟಕ್ಕೆ ಹೊತ್ತಿ ಉರಿದ ಮನೆ.. 2 ಲಕ್ಷ ನಗದು ಸೇರಿ ಇಡೀ ಮನೆ ಸುಟ್ಟು ಭಸ್ಮ!
ವಿಷಯ ತಿಳಿದಾಕ್ಷಣ ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದೆ. ಮೃತ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ. ಈ ಘಟನೆ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ತಿಳಿಸಿದೆ.