ಕರ್ನಾಟಕ

karnataka

By

Published : Mar 24, 2019, 5:24 PM IST

ETV Bharat / city

ಬಳ್ಳಾರಿ ಯಾವತ್ತಿಗೂ ನಮ್ದೆ: ಮಾಜಿ ಶಾಸಕ ಅನಿಲ್ ಲಾಡ್

ಶಾಸಕ ಶ್ರೀರಾಮುಲು, ಮಾಜಿ ಸಚಿವರಾದ ಗಾಲಿ‌ ಜನಾರ್ದನ ರೆಡ್ಡಿ, ‌ಕರುಣಾಕರ ರೆಡ್ಡಿ ಮಂತ್ರಿಯಾದ್ರು ಏನು‌ ಮಾಡಿದ್ರು?. ರಿಪಬ್ಲಿಕ್ ಅನ್ನೋ ಹೆಸರು ಬಂತು. ನಮ್ಮ ತಾತನ ಕಾಲದಿಂದಲೂ ಮೈನಿಂಗ್ ‌ಮಾಡಿದ್ದೀವಿ. ಆದ್ರೇ ಇವರಂತೆ ಮಾಡಿಲ್ಲ ಎಂದು ಮಾಜಿ ಶಾಸಕ ಹೆಚ್. ಅನಿಲ್ ಲಾಡ್ ಟೀಕಿಸಿದರು.

ಸಂಡೂರು ಪಟ್ಟಣದಲ್ಲಿಂದು ಲೋಕಸಭಾ ಚುನಾವಣಾ ನಿಮಿತ್ತ ಜಿಲ್ಲಾ ಕಾಂಗ್ರೆಸ್ - ಜೆಡಿಎಸ್ ಕಾರ್ಯಕರ್ತರ ಸಭೆ

ಬಳ್ಳಾರಿ: ಬಳ್ಳಾರಿ ಯಾವತ್ತಿಗೂ ನಮ್ದೆ ಎಂದು ಹೇಳುವ ಮೂಲಕ ಮಾಜಿ ಶಾಸಕ ಹೆಚ್. ಅನಿಲ್ ಲಾಡ್ ಅವರು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಹಾಲಿ ಶಾಸಕ ಬಿ.ಶ್ರೀರಾಮುಲು ವಿರುದ್ಧ ಹರಿಹಾಯ್ದಿದ್ದಾರೆ.

ಜಿಲ್ಲೆಯ ಸಂಡೂರು ಪಟ್ಟಣದಲ್ಲಿಂದು ಲೋಕಸಭಾ ಚುನಾವಣಾ ನಿಮಿತ್ತ ಜಿಲ್ಲಾ ಕಾಂಗ್ರೆಸ್ - ಜೆಡಿಎಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಹುಟ್ಟಿದ್ದು ಇಲ್ಲೆ. ನನ್ನ ಶಿಕ್ಷಣ ಇಲ್ಲೆ. ನನ್ನ ನಡೆ, ನುಡಿ ಹಾಗು ಮಾತೃ ಭಾಷೆ ಇಲ್ಲಿಯದ್ದೇ. ಹಾಗಾಗಿ ನಾನು ಯಾವತ್ತಿಗೂ ಬಳ್ಳಾರಿಯವನೇ ಎಂದರು.

ನಿಮಗೆ ಮೈನಿಂಗ್ ಪರಿಚಯಿಸಿಕೊಟ್ಟಿದ್ದೇ ನಾವು. ಆದರೆ, ನೀವು ಮಾಡಿದ್ದೇನು?. ಹಣದ ದರ್ಪ ತೋರಿದ್ದೀರಿ. ನಿಮ್ಮ ಪಾರ್ಟಿಯಲ್ಲೇ ನಾನಿದ್ದೆ. ಅಲ್ಲಿಯೂ ಕೂಡ ನಾನು ಶಾಸಕನಾಗಿರುವೆ. ನನ್ನ ಬಗ್ಗೆ ಅಪಪ್ರಚಾರ ಮಾಡಿದ್ರಿ. ಆದರೀಗ ನೀವು ಎಲ್ಲಿದ್ದೀರಿ? ಎಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ರೆಡ್ಡಿ ವಿರುದ್ಧ ಗುಡುಗಿದರು. ಮೀಸಲಾತಿ ಆಧಾರದ ಮೇಲೆ ನೀವು ಎಲ್ಲಿ ಬೇಕಾದ್ರೂ ಸ್ಪರ್ಧಿಸಿ, ಗೆಲುವು ಸಾಧಿಸಬಹುದು. ನಿಮಗೇನಾದ್ರೂ ಜಿಲ್ಲೆಯ ಬಗ್ಗೆ ಕಿಂಚಿತ್ತು ಕಾಳಜಿ ಇದೆಯಾ? ಎಂದು ಶಾಸಕ ಶ್ರೀರಾಮುಲು ವಿರುದ್ಧ ಟೀಕಿಸಿದರು.

ಸಂಡೂರು ಪಟ್ಟಣದಲ್ಲಿಂದು ಲೋಕಸಭಾ ಚುನಾವಣಾ ನಿಮಿತ್ತ ಜಿಲ್ಲಾ ಕಾಂಗ್ರೆಸ್ - ಜೆಡಿಎಸ್ ಕಾರ್ಯಕರ್ತರ ಸಭೆ

ಹಾಲಿ ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಅವರು 2008ರ ವಿಧಾನ ಸಭಾ ಚುನಾವಣೆಯಲ್ಲಿ ಈ ಜಿಲ್ಲೆಯಲ್ಲಿಒಬ್ಬರೇ ಶಾಸಕರಾಗಿ ಆಯ್ಕೆಯಾದ್ರೂ ಹೆದರಲಿಲ್ಲ. ‌ಈಗ ಯಾವ ಶಾಸಕರು ಬಂದ್ರೇನು, ಬಿಟ್ರೇನು ಸಮಾವೇಶ ನಡಿಯುತ್ತೆ‌ ಎಂದು ಪರೋಕ್ಷವಾಗಿ ಅತೃಪ್ತ ಶಾಸಕರನ್ನು‌ ಕುಟುಕಿದರು.ಶಾಸಕ ಬಿ.ಶ್ರೀರಾಮುಲು ಅವರು ಮಾಜಿ ಸಚಿವೆ ಬಸವ ರಾಜೇಶ್ವರಿ ಜೊತೆ ಕೆಲಸ ಮಾಡ್ತಿದ್ರು. ದಿವಾಕರ ಬಾಬು ಜತೆಗೆ ಇದ್ರು. ಕಾಂಗ್ರೆಸ್ ಕಾರ್ಯಕರ್ತರನ್ನು ಹೊಡೆದು ಹೀರೋ ಆದ್ರು. ಪಕ್ಷ ಬಿಟ್ಟು ಹೋದ್ರೂ ಬಿಜೆಪಿ ಅವರನ್ನು ಬೆಳಸಿತು. ಮೀಸಲಾತಿ ಬಳಸಿ ಕೊಂಡು ಬಿಜೆಪಿ ಪಕ್ಷ ಶ್ರೀರಾಮುಲು ಅವರನ್ನ ಬೆಳಸಿತು‌ ಎಂದರು.

ಶಾಸಕ ಶ್ರೀರಾಮುಲು, ಮಾಜಿ ಸಚಿವರಾದ ಗಾಲಿ‌ ಜನಾರ್ದನ ರೆಡ್ಡಿ ‌ಕರುಣಾಕರ ರೆಡ್ಡಿ ಮಂತ್ರಿಯಾದ್ರು ಏನು‌ ಮಾಡಿದ್ರು?. ರಿಪಬ್ಲಿಕ್ ಅನ್ನೋ ಹೆಸರು ಬಂತು. ನಮ್ಮ ತಾತನ ಕಾಲದಿಂದಲೂ ಮೈನಿಂಗ್ ‌ಮಾಡಿದ್ದೀವಿ. ಆದ್ರೇ ಇವರಂತೆ ಮಾಡಿಲ್ಲ. ನಾವೇ ಇವರಿಗೆ ಮೈನಿಂಗ್ ‌ಕಲಿಸಿದ್ದು. ವಿಧಾನ ಸಭೆಯಲ್ಲಿ ತೊಡೆ ತಟ್ಟಿದ್ರು, ಬಳ್ಳಾರಿ ನಮ್ದೆ ಎಂದು ದಮ್ಕಿ ಹಾಕಿದ್ರು, ಯಡಿಯೂರಪ್ಪ ಅವರಿಗೆ ಸ್ವಾಗತ ಕೋರಲು ಒಬ್ಬ ಎಸ್.ಪಿ ಕೂಡ ಜಿಂದಾಲ್ ‌ನಿಲ್ದಾಣಕ್ಕೆ ಹೋಗಲಿಲ್ಲ. ಈ ಬಗ್ಗೆ ಸಂತೋಷ ಹೆಗ್ಡೆ ಪುಸ್ತಕ ಕೂಡ ಬರೆದ್ರು ಎಂದರು.

ಕಾಂಗ್ರೆಸ್ ಪಾದಯಾತ್ರೆಯಲ್ಲಿ ಜನ ಇಲ್ಲವೆಂದ್ರು. ಹೀಗಾಗಿ ಹೆಲಿಕಾಪ್ಟರ್ ಮೂಲಕ ಶೂಟಿಂಗ್ ಮಾಡಿಸಿದ್ವಿ. ಅದನ್ನು ಟಿವಿಗಳಲ್ಲಿ ತೋರಿಸಿದ್ವಿ. ರೆಡ್ಡಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಮೂರು ತಾಸಿಗೊಮ್ಮೆ ಸೂಟ್ ಬದಲಿಸೋ ಮೋದಿ. ಆದರೆ ರಾಹುಲ್ ಸಿಂಪಲ್ ವ್ಯಕ್ತಿ. ಜುಬ್ಬಾ ಬಿಟ್ರೇ ಬೇರೆನು ಹಾಕಲ್ಲ. ನೋಟ್ ಬ್ಯಾನ್ ಆದ ಹದಿನೈದು ದಿನಕ್ಕೆ 500 ಕೋಟಿ ರೂ.ಗಳ ವೆಚ್ಚದಲ್ಲಿ ಮಗಳ ಮದುವೆ ಮಾಡ್ತಾರೆ. ಹಣ ಎಲ್ಲಿಂದ ಬಂತು. ನಮ್ಮ ಶಾಸಕರನ್ನು ಐವತ್ತು ಕೋಟಿ ಕೊಟ್ಟು ಖರೀದಿ ಮಾಡ್ತಾರೆ?. ಹಣ ಎಲ್ಲಿಂದ ಬರುತ್ತದೆ? ಎಂದು ಹರಿಹಾಯ್ದರು.

For All Latest Updates

TAGGED:

ABOUT THE AUTHOR

...view details