ಕರ್ನಾಟಕ

karnataka

ETV Bharat / city

ಅನ್ಯ ಜಿಲ್ಲೆಗಳ ವರದಿಯನ್ನಾಧರಿಸಿ ಲಾಕ್​ಡೌನ್​ ಬಗ್ಗೆ ನಿರ್ಧಾರ: ಸಚಿವ ಆನಂದ್​ಸಿಂಗ್ - Bellary News

ಮುಂದಿನ ಹದಿನೈದು ದಿನಗಳ ಕಾಲ ಕೋವಿಡ್ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಸಾಮರ್ಥ್ಯ ನಮ್ಮಲ್ಲಿದೆ. ಹೀಗಾಗಿ, ಅನ್ಯ ಜಿಲ್ಲೆಗಳಲ್ಲಾದ ಲಾಕ್​ಡೌನ್​ ಕುರಿತು ಪೂರ್ವಾಪರ ಪರಿಶೀಲನೆ ನಡೆಸಿ, ನಮ್ಮ ಜಿಲ್ಲೆಯಲ್ಲಿ ಲಾಕ್​ಡೌನ್ ಮಾಡಬೇಕೋ, ಬೇಡವೋ ಎಂಬುದರ ಕುರಿತು ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ಸಿಂಗ್ ತಿಳಿಸಿದ್ದಾರೆ.

Forest Minister Anand Singh  Statement
ಅನ್ಯ ಜಿಲ್ಲೆಗಳ ವರದಿಯನ್ನಾಧರಿಸಿ ಲಾಕ್​ಡೌನ್​ ಬಗ್ಗೆ ನಿರ್ಧಾರ: ಸಚಿವ ಆನಂದ್​ಸಿಂಗ್

By

Published : Jul 18, 2020, 11:44 PM IST

ಬಳ್ಳಾರಿ:ಈಗಾಗಲೇ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಲಾಕ್​ಡೌನ್ ಆದೇಶ ಜಾರಿಯಲ್ಲಿದೆ. ಆ ಜಿಲ್ಲೆಗಳಲ್ಲಾದ ವ್ಯತ್ಯಾಸ ಹಾಗೂ ಕೋವಿಡ್ ನಿಯಂತ್ರಣದ ಫಲಿತಾಂಶದ ವರದಿಯನ್ನಾಧರಿಸಿ ಬಳ್ಳಾರಿ ಜಿಲ್ಲೆಯ ‌ಲಾಕ್​ಡೌನ್​ಗೆ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ತಿಳಿಸಿದ್ದಾರೆ.

ಅನ್ಯ ಜಿಲ್ಲೆಗಳ ವರದಿಯನ್ನಾಧರಿಸಿ ಲಾಕ್​ಡೌನ್​ ಬಗ್ಗೆ ನಿರ್ಧಾರ: ಸಚಿವ ಆನಂದ್​ಸಿಂಗ್

ಜಿಲ್ಲಾ ಪಂಚಾಯಿತಿ ಕಚೇರಿಯ ನಜೀರ್ ಸಭಾಂಗಣದಲ್ಲಿಂದು ಕೋವಿಡ್ ನಿಯಂತ್ರಣದ ಪೂರ್ವಭಾವಿ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಹದಿನೈದು ದಿನಗಳ ಕಾಲ ಕೋವಿಡ್ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಸಾಮರ್ಥ್ಯ ನಮ್ಮಲ್ಲಿದೆ. ಹೀಗಾಗಿ, ಅನ್ಯ ಜಿಲ್ಲೆಗಳಲ್ಲಾದ ಲಾಕ್​ಡೌನ್​ ಕುರಿತು ಪೂರ್ವಾಪರ ಪರಿಶೀಲನೆ ನಡೆಸಿ, ನಮ್ಮ ಜಿಲ್ಲೆಯಲ್ಲಿ ಲಾಕ್​ಡೌನ್ ಮಾಡಬೇಕೋ, ಬೇಡವೋ ಎಂಬುದರ ಕುರಿತು ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.

ಮುಂದಿನ ಏಳು ದಿನಗಳ‌ವರೆಗೆ ಕಾದುನೋಡಿ:ನಾನಂತೂ ಜನರ ಆರೋಗ್ಯ ವಿಚಾರದಲ್ಲಿ ರಾಜಿಯಾಗಿಲ್ಲ. ನಮ್ಮ ಸರ್ಕಾರ ಕೂಡ ಇಂಥದ್ದೇ ನಿಲುವನ್ನು ಹೊಂದಿದೆ. ಮುಂದಿನ ಏಳು ದಿನಗಳವರೆಗೆ ಕಾದುನೋಡಿ. ಆ ಮೇಲೆ ನಾನೇನು ಮಾಡ್ತೀನಿ ಅಂತ ಬಹಿರಂಗವಾಗಿ ಹೇಳೋಲ್ಲ. ಮಾಡಿ ತೋರಿಸುವೆ ಎಂದರು.

ಜಿಂದಾಲ್​ನಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ: ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಈ ಹಿಂದೆ 10 ಸಾವಿರ ಆ್ಯಂಟಿಜೆನ್ ಕಿಟ್​ಗಳನ್ನು ಖರೀದಿಸಲಾಗಿತ್ತು. ಅದರಲ್ಲಿ 5,000 ಜಿಂದಾಲ್​ಗೆ, 5,000 ಜಿಲ್ಲಾಡಳಿತಕ್ಕೆ ಹಂಚಿಕೆ ಮಾಡಲಾಗಿತ್ತು. ಈಗ ಕೂಡ ಹೊಸದಾಗಿ 10 ಸಾವಿರ ಆ್ಯಂಟಿಜೆನ್ ಕಿಟ್​ಗಳನ್ನು ಖರೀದಿಸಲು ಜಿಲ್ಲಾಡಳಿತಕ್ಕೆ ಇಂಡೆಂಟ್ ನೀಡಲಾಗಿದೆ. ಪ್ರತಿದಿನ 1,200 ಮಂದಿಗೆ ಆ್ಯಂಟಿಜೆನ್ ಕಿಟ್​ಗಳಿಂದ ಪರೀಕ್ಷೆ ಮಾಡಲಾಗುತ್ತೆ ಎಂದರು.

ಇನ್ನು, ಅಂತಾರಾಜ್ಯ ಗಡಿಭಾಗದ ಹಳ್ಳಿಗಳಿಗೆ ಗಣಿಜಿಲ್ಲೆಯಿಂದ ಹೋಗುವ ಹಾಗೂ ಬರುವ ಬಸ್​ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗುವುದು. ಜಿಲ್ಲಾ ಪೊಲೀಸ್ ಇಲಾಖೆ ಕೂಡ ಅಂತಾರಾಜ್ಯ ಗಡಿಕಾಯುವ ಕಾಯಕವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಎಸ್​ಪಿ ಸಿ.ಕೆ. ಬಾಬಾ ಅವರಿಗೆ ಸೂಚನೆ ನೀಡಿದರು.

ABOUT THE AUTHOR

...view details