ಕರ್ನಾಟಕ

karnataka

ETV Bharat / city

ಪಡಿತರ ಜೋಳ ನಾಪತ್ತೆ ಪ್ರಕರಣ: 16 ಜನರ ಮೇಲೆ ಎಫ್​ಐಆರ್​ - ಪಡಿತರ ಜೋಳ ಅಕ್ರಮ ಮಾರಾಟ ಪ್ರಕರಣದಲ್ಲಿ ೧೬ ಜನರ ಮೇಲೆ ಎಫ್​ಐಆರ್​ ದಾಖಲು

ಸಿರುಗುಪ್ಪದ ಕೆಎಫ್​ಸಿಎಸ್​ಸಿ ಗೋದಾಮುನಲ್ಲಿ 7,282 ಕ್ವಿಂಟಾಲ್ ಹಾಗೂ ಬಳ್ಳಾರಿ ಎಸ್​ಡಬ್ಲೂಸಿ ಗೋದಾಮುನಲ್ಲಿ 1,237.42 ಜೋಳ ನಾಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ 16 ಜನರ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ.

case of disappearance of ration corn
16 ಜನರ ಮೇಲೆ ಎಫ್​ಐಆರ್​

By

Published : Jul 18, 2022, 10:14 PM IST

ಬಳ್ಳಾರಿ :ಬಡವರ ಹಸಿವು ನೀಗಿಸಬೇಕಾಗಿದ್ದ ಸಾವಿರಾರು ಕ್ವಿಂಟಾಲ್ ಪಡಿತರ ಜೋಳ ಅಕ್ರಮ ಪ್ರಕರಣಕ್ಕೆ ಮತ್ತಷ್ಟು ಅಧಿಕಾರಿಗಳು ಬಂಧನ ಭೀತಿ ಎದುರಿಸುವಂತಾಗಿದೆ. ಸರ್ಕಾರಿ ಗೋದಾಮು ಅಧಿಕಾರಿಗಳು, ಟ್ರೇಡರ್ಸ್ ಸೇರಿದಂತೆ ಈಗ ಹೆಚ್ಚುವರಿ 16 ಜನರ ವಿರುದ್ದ ಎಫ್​ಐಆರ್ ದಾಖಲಾಗಿದೆ. ಇತ್ತ ಎಫ್​ಐಆರ್ ದಾಖಲಾಗುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.

ಬಳ್ಳಾರಿ ಮತ್ತು ಸಿರುಗುಪ್ಪ ತಾಲೂಕಿನ ಸರ್ಕಾರಿ ಗೋದಾಮುನಲ್ಲಿ ಸಂಗ್ರಹಿಸಿದ್ದ ಸಾವಿರಾರು ಪಡಿತರ ಜೋಳ ನಾಪತ್ತೆಯಾಗಿರುವ ಪ್ರಕರಣ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿರುಗುಪ್ಪದ ಕೆಎಫ್​ಸಿಎಸ್​ಸಿ ಗೋದಾಮುನಲ್ಲಿ 7,282 ಕ್ವಿಂಟಾಲ್ ಹಾಗೂ ಬಳ್ಳಾರಿ ಎಸ್​ಡಬ್ಲ್ಯೂಸಿ ಗೋದಾಮುನಲ್ಲಿ 1,237.42 ಜೋಳ ನಾಪತ್ತೆಯಾಗಿತ್ತು. ಈ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಗೋದಾಮು ವ್ಯವಸ್ಥಾಪಕ ಬಸವರಾಜ ಹಾಗೂ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೆಎಫ್​ಸಿಎಸ್​ಸಿ ಜಿಲ್ಲಾ ವ್ಯವಸ್ಥಾಪಕ ನಾರಾಯಣಸ್ವಾಮಿ ಹಾಗೂ ಖರೀದಿ ಅಧಿಕಾರಿ ಶಿವೇಗೌಡ ವಿರುದ್ದ ಪ್ರಕರಣ ದಾಖಲಾಗಿತ್ತು.

ಪಡಿತರ ಜೋಳ ನಾಪತ್ತೆ ಪ್ರಕರಣದಲ್ಲಿ 16 ಜನರ ಮೇಲೆ ಎಫ್​ಐಆರ್ ಹಾಕಲಾಗಿದೆ - ​ಸೈದುಲು ಅಡಾವತ್

ಈಗಾಗಲೇ ಸಿರುಗುಪ್ಪ ಪೊಲೀಸರು ಗೋದಾಮು ವ್ಯವಸ್ಥಾಪಕ ಬಸವರಾಜ್​ರನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ನಾರಾಯಣಸ್ವಾಮಿ ಅನಾರೋಗ್ಯದ ನೆಪವೊಡ್ಡಿ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು, ಶಿವೇಗೌಡ ನಾಪತ್ತೆಯಾಗಿದ್ದಾರೆ. ಇನ್ನೂ ತನಿಖೆ ಕೈಗೆತ್ತಿಕೊಂಡಿರುವ ಸಿರುಗುಪ್ಪ ಪೊಲೀಸರು ಈಗ ಆಹಾರ ಇಲಾಖೆ ಅಧಿಕಾರಿಗಳು ಟ್ರೇಡರ್ಸ್ ಸೇರಿದಂತೆ ಒಟ್ಟು 16 ಜನರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಇನ್ನೂ ಅಧಿಕಾರಿಗಳು ಸೇರಿದಂತೆ 16 ಜನರ ವಿರುದ್ದ ಪ್ರಕರಣ ದಾಖಲಾಗುತ್ತಿಂದೆಯೇ ಎಲ್ಲರೂ ತಲೆಮರೆಯಿಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ಮೂರು ಪೊಲೀಸ್ ತನಿಖಾ ತಂಡಗಳನ್ನ ರಚನೆ ಮಾಡಲಾಗಿದೆ. ಶೀಘ್ರದಲ್ಲಿ ಆರೋಪಿಗಳನ್ನ ಬಂಧಿಸುವ ಸಾಧ್ಯತೆ ಇದೆ. ಆದರೆ ಈ ಪ್ರಕರಣದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ಇದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ ಈ ಪ್ರಕರಣ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಸಮಗ್ರ ತನಿಖೆಯಾಗಬೇಕಾಗಿದೆ. ಪ್ರಸಕ್ತ ಸಾಲಿನಲ್ಲಿ ಮಾತ್ರ ಸಾವಿರಾರು ಕ್ವಿಂಟಾಲ್ ಜೋಳ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಆದರೆ ಇದು ಹಲವು ವರ್ಷಗಳಿಂದಲೂ ಪಡಿತರ ಜೋಳದಲ್ಲಿ ಅಧಿಕಾರಿಗಳು ಅಕ್ರಮ ಮಾಡುತ್ತಲೇ ಬಂದಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಅಂತಿದ್ದಾರೆ ಹೋರಾಟಗಾರರು.

ಪಡಿತರ ಜೋಳ ಅಕ್ರಮ ಪ್ರಕರಣ ಸದ್ಯ ಗಣಿನಾಡಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಮೇಲಧಿಕಾರಿಗಳು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಅನ್ನೋ ಆರೋಪಗಳು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಬಡವರಿಗೆ ಸೇರಬೇಕಿದ್ದ ಪಡಿತರ ಜೋಳದಲ್ಲೂ ಅಕ್ರಮ ಎಸಗಿರುವವರ ವಿರುದ್ಧ ಕಠಿಣ ಶಿಕ್ಷೆಯಾಗಬೇಕಾಗಿದೆ. ಆ ಮೂಲಕ ಇಂತಹ ಅಕ್ರಮಗಳಿಗೆ ಬ್ರೇಕ್ ಹಾಕಬೇಕಾಗಿದೆ.

ಇದನ್ನೂ ಓದಿ :ಗೋವಾದಿಂದ ಹೈದರಾಬಾದ್‌ಗೆ 26.29 ಲಕ್ಷ ಮೌಲ್ಯದ ಅಕ್ರಮ ಮದ್ಯ ಸಾಗಣೆ : ಒಬ್ಬನ ಬಂಧನ

ABOUT THE AUTHOR

...view details