ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಜೌಕು ಹಾಗೂ ಹಂಪಾದೇವನಹಳ್ಳಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪ್ರಾಪ್ತೆಯರಿಗೆ ಬಾಲ್ಯ ವಿವಾಹ ಮಾಡಿದ ಪೋಷಕರು ಹಾಗೂ ವರನ ವಿರುದ್ಧ ಹೊಸಪೇಟೆ ಸಿಡಿಪಿಒ ಅಮರೇಶ್, ಕಂಪ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ 1 :

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಿಠಲಾಪುರ ಗ್ರಾಮದ ಸ್ವಾಮಿ (20 ವರ್ಷ), 14 ವರ್ಷದ ಬಾಲಕಿಯನ್ನು 15 ಜುಲೈ 2020 ರಂದು ಬಳ್ಳಾರಿಯ ಕೊರ್ಲಗುಂದಿ ಗ್ರಾಮದ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಈ ಬಾಲ್ಯ ವಿವಾಹವನ್ನು ಬಾಲಕಿಯ ತಂದೆ ಷಣ್ಮುಖ ಹಾಗೂ ತಾಯಿ ನಿರ್ಮಲ ಸೇರಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಹೊಸಪೇಟೆಯ ಸಿಡಿಪಿಒ ಅಧಿಕಾರಿ ಅಮರೇಶ್ ದೂರು ದಾಖಲಿಸಿದ್ದಾರೆ.
ಪ್ರಕರಣ 2:
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮದ ಶಂಕರ, 14 ವರ್ಷದ ಬಾಲಕಿಯನ್ನು 29 ಮೇ 2020 ರಂದು ತೆಕ್ಕಲಕೋಟೆ ಗ್ರಾಮದ ತನ್ನ ಮನೆಯಲ್ಲಿ ಮದುವೆಯಾಗಿದ್ದಾನೆ. ಬಾಲಕಿಯ ತಂದೆ ಚಾನಾಳ್ ಈರಣ್ಣ ಮತ್ತು ತಾಯಿ ಸುಂಕಮ್ಮ ಈ ವಿವಾಹಕ್ಕೆ ಕಾರಣರಾಗಿದ್ದಾರೆ. ಆದ್ದರಿಂದ ಬಾಲ್ಯ ವಿವಾಹ ಮಾಡಿದ ಕಾರಣ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಹೊಸಪೇಟೆಯ ಸಿಡಿಪಿಒ ಅಧಿಕಾರಿ ಅಮರೇಶ್ ದೂರು ದಾಖಲಿಸಿದ್ದಾರೆ. ಸದ್ಯ ಈ ಎರಡು ಪ್ರಕರಣ ಸಂಬಂಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿವೆ.