ಬಳ್ಳಾರಿ: ರಂಗಜಂಗಮ ಸಂಸ್ಥೆ ಏರ್ಪಡಿಸಿರುವ ಕನ್ನಡ ರಂಗ ಹಬ್ಬದ ಎರಡನೇ ದಿನದ ನಾಟಕೋತ್ಸವದಲ್ಲಿ ಚಿದಂಬರರಾವ್ ಜಂಬೆ ನಿರ್ದೇಶನದ ಬೆಂದಕಾಳು ಆನ್ ಟೋಸ್ಟ್ ನಾಟಕ ಪ್ರದರ್ಶನಗೊಂಡಿತು. ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರ ರಚನೆ ಇದಾಗಿದೆ.
ಕಾರ್ಯಕ್ರಮದಲ್ಲಿ ಸರಳಾದೇವಿ ಕಾಲೇಜಿನ ಉಪನ್ಯಾಸಕ ದೇವಣ್ಣ ಮಾತನಾಡಿ, ಕಲೆಯನ್ನು ಕಟ್ಟುವ ಕೆಲಸವನ್ನು ರಂಗಜಂಗಮ ಸಂಸ್ಥೆ ಮಾಡುತ್ತಿದೆ. ಬಳ್ಳಾರಿಯಲ್ಲಿ ಪದವಿ ಕಾಲೇಜ್ ಮತ್ತು ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗ ಆರಂಭವಾಗಿವೆ. ಯುವಕರು ಇದರ ಉಪಯೋಗ ಪಡೆಯಬೇಕು. ಬಳ್ಳಾರಿ ನಾಟಕದ ತವರೂರು ಆಗಿದೆ ಎಂದು ತಿಳಿಸಿದರು.