ಹೊಸಪೇಟೆ(ವಿಜಯನಗರ): ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಡಿ.ಎಂ.ಎಫ್. (ಜಿಲ್ಲಾ ಖನಿಜ ನಿಧಿ) ಅನುದಾನದಲ್ಲಿ 1 ಕೋಟಿ 10 ಲಕ್ಷ ರೂ. ಮೌಲ್ಯದ 121 ಮೋಟರ್ ಸೈಕಲ್ಗಳನ್ನು ಶಾಸಕ ಭೀಮಾನಾಯ್ಕ್ ವಿತರಿಸಿದರು.
ಸಿದ್ದರಾಮಯ್ಯರ ಹೋರಾಟದ ಫಲವಾಗಿ ಡಿ.ಎಂ.ಎಫ್‌ನಲ್ಲಿ ಹಣ: ಶಾಸಕ ಭೀಮಾನಾಯ್ಕ - mla bhimanaik cycle distribution
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಡಿ.ಎಂ.ಎಫ್ (ಜಿಲ್ಲಾ ಖನಿಜ ನಿಧಿ) ಅನುದಾನದಲ್ಲಿ 1 ಕೋಟಿ 10 ಲಕ್ಷ ಮೌಲ್ಯದ 121 ಮೋಟರ್ ಸೈಕಲ್ಗಳನ್ನು ಶಾಸಕ ಭೀಮಾನಾಯ್ಕ್ ವಿತರಿಸಿದರು.
ಶಾಸಕ ಭೀಮಾನಾಯ್ಕ್
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೋರಾಟದ ಫಲವಾಗಿ ಬಳ್ಳಾರಿ ಡಿಸಿ ಖಾತೆಯಲ್ಲಿ 27 ಸಾವಿರ ಕೋಟಿ ರೂ ಡಿ.ಎಂ.ಎಫ್ ಹಣ ಇದೆ. ಅವರು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದರು. ಅದರ ಫಲವಾಗಿ ಇಂದು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದರು.
ಡಿ.ಎಂ.ಎಫ್. ಹಣವನ್ನು ರಾಜ್ಯ ಸರ್ಕಾರದ ಖಾತೆಯಲ್ಲಿ ಉಳಿಯಲು ಅಂದು ಯೋಜನೆ ರೂಪಿಸಲಾಗಿತ್ತು. ಅದರ ಫಲವಾಗಿ ಇಂದು ನಮ್ಮ ಕ್ಷೇತ್ರದ 121 ವಿಶೇಷಚೇತನರಿಗೆ ಮೂರು ಚಕ್ರದ ಮೋಟರ್ ಸೈಕಲ್ ವಿತರಿಸುವಂತಾಯ್ತು ಎಂದು ತಿಳಿಸಿದರು.