ಬಳ್ಳಾರಿ:ಮಹಾ ಮೃತ್ಯುಂಜಯ ತಪೋತ್ಸವದ ಮೆರವಣಿಗೆಯಲ್ಲಿ ಬಲಿಜ ಸಮುದಾಯದಿಂದ ಜೈನ ಮುನಿಯಾಗಿ ದೀಕ್ಷೆ ಪಡೆದ ದೇವಸಿದ್ ವಿಜಯ್ ಜೀ ಮೆರವಣಿಗೆ ನಡೆಯಿತು.
ಬಳ್ಳಾರಿಯಲ್ಲೊಂದು ವಿಶಿಷ್ಠ ದೀಕ್ಷೆ... ಹೀಗಿತ್ತು ಆ ಸಂಭ್ರಮ! - ಜೈನ ಮುನಿಯಾಗಿ ದೀಕ್ಷೆ ಪಡೆದ ದೇವಸಿದ್ ವಿಜಯ್
ಬಲಿಜ ಸಮುದಾಯದಿಂದ ಜೈನ ಮುನಿಯಾಗಿ ದೀಕ್ಷೆ ಪಡೆದ ದೇವಸಿದ್ ವಿಜಯ್ ಜೀ ಅವರ ಮೆರವಣಿಗೆಯನ್ನು ಬಳ್ಳಾರಿಯಲ್ಲಿ ಮಾಡಲಾಯ್ತು. ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುವ ಯುವಕನೊಬ್ಬ ಜೈನ ಮುನಿಯಾಗಿದ್ದು, ಜೈನ ಸಮುದಾಯ ಅವರನ್ನು ದಾರಿಯುದ್ದಕ್ಕೂ ಮೆರವಣಿಗೆ ಮಾಡಿಕೊಂಡು ಬಂದಿದ್ದು ವಿಶೇಷವಾಗಿತ್ತು.
![ಬಳ್ಳಾರಿಯಲ್ಲೊಂದು ವಿಶಿಷ್ಠ ದೀಕ್ಷೆ... ಹೀಗಿತ್ತು ಆ ಸಂಭ್ರಮ!](https://etvbharatimages.akamaized.net/etvbharat/prod-images/768-512-4058809-thumbnail-3x2-jay.jpg)
ದೇವಸಿದ್ ವಿಜಯ್ ಸಂಭ್ರಮದ ಮೆರವಣಿಗೆ
ಬಳ್ಳಾರಿ ನಗರದ ಜೈನ್ ಮಾರುಕಟ್ಟೆ ರಸ್ತೆಯಿಂದ ಪ್ರಾರಂಭವಾದ ಮೆರವಣಿಗೆ ಜೈನ್ ಸಮುದಾಯದ ದೇವಸ್ಥಾನದವರೆಗೆ ನಡೆಯಿತು. ಮೆರವಣಿಗೆ ಸಮಯದಲ್ಲಿ ಜೈನ ಮುನಿಗಳಿಗೆ ಅಕ್ಷತೆ ಹಾಕಿ ನಮಸ್ಕರಿಸಲಾಯ್ತು.
ದೇವಸಿದ್ ವಿಜಯ್ ಸಂಭ್ರಮದ ಮೆರವಣಿಗೆ
ಒಬ್ಬ ಜೈನ ಸಮುದಾಯದ ಮಾಲೀಕರ ಬೆಳ್ಳಿ ಮತ್ತು ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುವ ಯುವಕ ಜೈನ ಮುನಿಯಾಗಿದ್ದು, ಜೈನ ಸಮುದಾಯ ಅವರನ್ನು ದಾರಿಯುದ್ದಕ್ಕೂ ಮೆರವಣಿಗೆ ಮಾಡಿಕೊಂಡು ಬಂದಿದ್ದು ವಿಶೇಷವಾಗಿತ್ತು.