ಹೊಸಪೇಟೆ:ವ್ಯಕ್ತಿಯೊಬ್ಬ ಈಜಲು ಹೋಗಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರುವ ಘಟನೆ ತಾಲೂಕಿನ ಐತಿಹಾಸಿಕ ಹಂಪಿ ನರಹರಿ ಬೃಂದಾವನದ ಬಳಿ ತುಂಗಭದ್ರಾ ನದಿಯಲ್ಲಿ ನಡೆದಿದೆ.
ಹಂಪಿ: ತುಂಗಭದ್ರ ನದಿಯಲ್ಲಿ ಈಜಲು ಹೋದ ವ್ಯಕ್ತಿ ನೀರುಪಾಲು - ನಗರದ ಚಿತ್ತವಾಡ್ಗಿ ನಿವಾಸಿ ಅನಂತಚಾರ್ಯ
ವ್ಯಕ್ತಿಯೊಬ್ಬ ಈಜಲು ಹೋಗಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರುವ ಘಟನೆ ತಾಲೂಕಿನ ಐತಿಹಾಸಿಕ ಹಂಪಿ ನರಹರಿ ಬೃಂದಾವನದ ಬಳಿ ತುಂಗಭದ್ರಾ ನದಿಯಲ್ಲಿ ನಡೆದಿದೆ.
![ಹಂಪಿ: ತುಂಗಭದ್ರ ನದಿಯಲ್ಲಿ ಈಜಲು ಹೋದ ವ್ಯಕ್ತಿ ನೀರುಪಾಲು KN_HPT_1_TUNGABADRA_NADIYALLI_VYAKTASAVAU_SCRIPT_KA10028](https://etvbharatimages.akamaized.net/etvbharat/prod-images/768-512-5750771-thumbnail-3x2-rail.jpg)
ಹಂಪಿ ತುಂಗಭದ್ರ ನದಿಯಲ್ಲಿ ಈಜಲು ಹೋಗಿ ವ್ಯಕ್ತಿ ಸಾವು
ನಗರದ ಚಿತ್ತವಾಡ್ಗಿ ನಿವಾಸಿ ಅನಂತಾಚಾರ್ಯ (54) ನೀರಿನಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿ ಎನ್ನಲಾಗಿದೆ. ಹಂಪಿಯ ನರಹರಿ ತೀರ್ಥ ಆರಾಧನಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ಪೊಲೀಸರು ವ್ಯಕ್ತಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.