ಬಳ್ಳಾರಿ: ಶಾಸಕ ಜಿ. ಸೋಮಶೇಖರ್ ರೆಡ್ಡಿಯವರ ಪ್ರಚೋದನಕಾರಿ ಭಾಷಣವನ್ನ ಮುಲಾಜಿಲ್ಲದೆ ಸಮರ್ಥಿಸಿಕೊಳ್ಳುವೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಗಣತಂತ್ರ ದಿನವೂ ಅಸಂವಿಧಾನಿಕ ಭಾಷಣ ಸಮರ್ಥಿಸಿದ ಡಿಸಿಎಂ ಸವದಿ! ಏನದು ಇಲ್ಕೇಳ್ರೀ.. - ಸೋಮಶೇಖರ್ ರೆಡ್ಡಿ ಪ್ರಚೋದನಕಾರಿ ಭಾಷಣವನ್ನು ಮುಲಾಜಿಲ್ಲದೆ ಸಮರ್ಥಿಸಿಕೊಳ್ಳುವೆ
ಶಾಸಕ ಸೋಮಶೇಖರ್ ರೆಡ್ಡಿಯವರ ಪ್ರಚೋದನಕಾರಿ ಭಾಷಣವನ್ನ ಮುಲಾಜಿಲ್ಲದೇ ಸಮರ್ಥಿಸಿಕೊಳ್ಳುವೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಆ ಮೂಲಕ ಸಂವಿಧಾನ ವಿರೋಧಿ ಹೇಳಿಕೆ ಬೆಂಬಲಿಸಿ ಗಣತಂತ್ರ ದಿನವೇ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿಂದು 71ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ರೆಡ್ಡಿಯವರ ಪ್ರಚೋದನಕಾರಿ ಭಾಷಣದ ಹಿಂದೆ ಮಂಗಳೂರಿನ ಕಾಂಗ್ರೆಸ್ ಶಾಸಕರೊಬ್ಬರು ಇಡೀ ರಾಜ್ಯಕ್ಕೆ ಬೆಂಕಿ ಹೊತ್ತಿಕೊಳ್ಳುತ್ತೆ ಎಂದು ಹೇಳಿದ್ದರು. ಹಾಗಾಗಿ ಶಾಸಕ ರೆಡ್ಡಿಯವರು ಪ್ರಚೋದನಕಾರಿ ಭಾಷಣವನ್ನ ನಾನು ಮುಲಾಜಿಲ್ಲದೆ ಸಮರ್ಥನೆ ಮಾಡಿಕೊಳ್ಳುವೆ ಎಂದರು.
ಪೂರ್ಣ ಪ್ರಮಾಣದ ಮಂತ್ರಿಮಂಡಲದ ವಿಸ್ತರಣೆಯಾಗಿಲ್ಲ. ಈ ತಿಂಗಳಾಂತ್ಯಕ್ಕೆ ವಿಸ್ತರಣೆಯಾಗಲಿದೆ. ಸಚಿವ ಸಂಪುಟ ವಿಸ್ತರಣೆ ಬಳಿಕ ಜಿಲ್ಲೆಗೆ ಒಬ್ಬ ಸಚಿವರನ್ನಾಗಿ ರಾಜ್ಯ ಸರ್ಕಾರ ನೇಮಿಸಲಿದೆ. ನಾನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಆಗಿ ಕೆಲಸ ಮಾಡಲು ಇಷ್ಟವಿದೆ. ಮುಖ್ಯಮಂತ್ರಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.