ಕರ್ನಾಟಕ

karnataka

ETV Bharat / city

ಮಾರ್ಚ್​ನಲ್ಲಿ ವಿಜಯನಗರ ಜಿಲ್ಲೆಗೆ ಡಿಸಿ, ಎಸ್​ಪಿ, ಜಿಪಂ ಸಿಇಒ ನೇಮಕ: ಆನಂದ್ ಸಿಂಗ್ - ವಿಜಯನಗರ ಜಿಲ್ಲೆ

ಸದ್ಯಕ್ಕೆ ಹೊಸಪೇಟೆ ನಗರದ ಕರ್ನಾಟಕ ಗೃಹ ಮಂಡಳಿ ಪ್ರದೇಶದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ವಿಜಯನಗರ ಜಿಲ್ಲಾ ಕಚೇರಿ ಪ್ರಾರಂಭ ಮಾಡಲಾಗುವುದು. ಮಾರ್ಚ್​ ತಿಂಗಳಿನಲ್ಲಿ ವಿಜಯನಗರ ಜಿಲ್ಲೆಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ನೇಮಕ ಮಾಡಲಾಗುವುದು ಸಚಿವ ಆನಂದ್‌‌ ಸಿಂಗ್ ತಿಳಿಸಿದರು.

dc-sp-appoint-to-vijayanagar-district-in-march
ಮಾರ್ಚ್​ನಲ್ಲಿ ವಿಜಯನಗರ ಜಿಲ್ಲೆಗೆ ಡಿಸಿ, ಎಸ್​ಪಿ, ಜಿ.ಪಂ ಸಿಇಒ ನೇಮಕ: ಆನಂದ್ ಸಿಂಗ್

By

Published : Feb 13, 2021, 4:55 PM IST

ಹೊಸಪೇಟೆ: ಮಾರ್ಚ್​ ತಿಂಗಳಿನಲ್ಲಿ ವಿಜಯನಗರ ಜಿಲ್ಲೆಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ನೇಮಕ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌‌ ಸಿಂಗ್ ತಿಳಿಸಿದರು.

ಮಾರ್ಚ್​ನಲ್ಲಿ ವಿಜಯನಗರ ಜಿಲ್ಲೆಗೆ ಡಿಸಿ, ಎಸ್​ಪಿ, ಜಿ.ಪಂ ಸಿಇಒ ನೇಮಕ: ಆನಂದ್ ಸಿಂಗ್

ಹೊಸಪೇಟೆ ನಗರದ ಕರ್ನಾಟಕ ಗೃಹ ಮಂಡಳಿ ಪ್ರದೇಶವನ್ನು ಇಂದು ಸ್ವಚ್ಛಗೊಳಿಸಲಾಯಿತು. ಸ್ವಚ್ಛತಾ ಕಾರ್ಯ ಪರಿಶೀಲಿಸಿ ಮಾತನಾಡಿದ ಅವರು, ಈ ಹಿಂದೆ ಕರ್ನಾಟಕ‌ ಗೃಹ ಮಂಡಳಿಗೆ 81 ಎಕರೆ ಸೇರಿತ್ತು. ಅದರಲ್ಲಿ 40 ಎಕರೆಯನ್ನು ವಿಜಯನಗರ ಜಿಲ್ಲಾ ಕಚೇರಿಗೆ ನೀಡಲಾಗಿದೆ. ಮೊದಲು ವಿಶೇಷ ಅಧಿಕಾರಿಗಳು ಬರಲಿದ್ದಾರೆ. ಮಾರ್ಚ್​ ತಿಂಗಳಿನಲ್ಲಿ ವಿಜಯನಗರ ಜಿಲ್ಲೆಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ನೇಮಕ ಮಾಡಲಾಗುವುದು ಎಂದರು.

ಇಲ್ಲಿನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಜಿಲ್ಲಾ ಕಚೇರಿ ಪ್ರಾರಂಭ ಮಾಡಲಾಗುವುದು. ಹಳೆಯ ಕಟ್ಟಡವನ್ನು ಸರಿಪಡಿಸಲಾಗುವುದು. ಬಳಿಕ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾಗಲಿದೆ ಎಂದರು.

ABOUT THE AUTHOR

...view details