ಬಳ್ಳಾರಿ:ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಜಲಸಂಪನ್ಮೂಲ ಸಚಿವ ಡಿ. ಕೆ ಶಿವಕುಮಾರ್, ಉಗ್ರಪ್ಪ ಪರ ಮತಯಾಚನೆ ಮಾಡಿದರು.
ನಾನು, ಉಗ್ರಪ್ಪ ಬಳ್ಳಾರಿ ಮತ್ತು ಈ ದೇಶದ ಧ್ವನಿಯಾಗಿ ಇರುತ್ತೇವೆ : ಡಿಕೆಶಿ - undefined
ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಜಲಸಂಪನ್ಮೂಲ ಸಚಿವ ಡಿ. ಕೆ ಶಿವಕುಮಾರ್ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಈ ಪ್ರಚಾರದಲ್ಲಿ ಶಾಸಕ ಭೀಮನಾಯಕ, ಅಭ್ಯರ್ಥಿ ವಿ. ಎಸ್ ಉಗ್ರಪ್ಪ, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಶಿವಯೋಗಿ ಹಿರಿಯ ನಾಯಕರು ಹಾಗೂ ಪದಾಧಿಕಾರಿಗಳು ಭಾಗವಹಿಸಿದರು.
ನಂತರ ಮಾತನಾಡಿದ ಡಿಕೆಶಿ, ನಾನು ಮತ್ತು ಉಗ್ರಪ್ಪ ಈ ದೇಶ ಮತ್ತು ಬಳ್ಳಾರಿ ಜಿಲ್ಲೆಯ ಜನರ ಧ್ವನಿಯಾಗಿ, ಸೇವಕರಾಗಿ ಇರುತ್ತೇವೆ. ಹೇಗೆ ಬೀಮನಾಯ್ಕ್ , ನನ್ನ (ಡಿಕೆಶಿ) ಹಿಡಿದುಕೊಂಡು ನಿಮ್ಮ ಊರಿನ ಕೆಲಸ ಕಾರ್ಯ ಮಾಡಿಕೊಂಡು ಬಂದ್ರೋ, ಹಾಗೆಯೇ ದೆಹಲಿಯಿಂದ ಜಿಲ್ಲೆಗೆ ಏನಾದರೂ ಗುರುತು ಆಗುವಂತೆ ಕೆಲಸ ಮಾಡಿಕೊಡುವ ಭರವಸೆ ನೀಡಿದರು.
ನಿಮ್ಮ ಹೋರಾಟಗಳಿಗೆ ಬೆಂಬಲ ನೀಡುತ್ತೇವೆ. ಅದಕ್ಕೆ ನಿಮ್ಮ ಸ್ವಾಭಿಮಾನ ಉಳಿಸುವ ಕೆಲಸ ಮಾಡುತ್ತೇವೆ. ನೀವು ವೋಟ್ ಹಾಕಿದಕ್ಕೆ ನಿಮಗೆ ಅವಮಾನ ಆಗುವುದಿಲ್ಲ. ವೋಟ್ಗೆ ಬೆಲೆ ಇರುತ್ತೆ. ಉಗ್ರಪ್ಪರಿಗೆ ಮತ ನೀಡಿ, ಬೀಮನಾಯ್ಕ್ ಕೈ ಬಲಪಡಿಸಬೇಕು ಎಂದರು.