ಬಳ್ಳಾರಿ:ಜಿಲ್ಲೆಯ ಸಂಡೂರು ತಾಲೂಕಿನ ಜೆಎಸ್ಡಬ್ಲ್ಯೂಗೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ ನೀಡಿದ್ದಾರೆ.
ಓದಿ: ಎಕ್ಸ್ಕ್ಲ್ಯೂಸಿವ್.. ಆಸೀಸ್ ವಿರುದ್ಧದ ಟೆಸ್ಟ್ ಸರಣಿ ಜಯ ಜೀವನದಲ್ಲಿ ಮರೆಯಲ್ಲ : ಸೈನಿ
ಬಳ್ಳಾರಿ:ಜಿಲ್ಲೆಯ ಸಂಡೂರು ತಾಲೂಕಿನ ಜೆಎಸ್ಡಬ್ಲ್ಯೂಗೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ ನೀಡಿದ್ದಾರೆ.
ಓದಿ: ಎಕ್ಸ್ಕ್ಲ್ಯೂಸಿವ್.. ಆಸೀಸ್ ವಿರುದ್ಧದ ಟೆಸ್ಟ್ ಸರಣಿ ಜಯ ಜೀವನದಲ್ಲಿ ಮರೆಯಲ್ಲ : ಸೈನಿ
ಜಿಂದಾಲ್ ಸಂಸ್ಥೆಯ ಪಿಆರ್ಓ ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕೆ.ಎಲ್. ರಾಹುಲ್ ಅವರು ಜಿಂದಾಲ್ ಕಂಪನಿಯ ಜಾಹೀರಾತಿಗಾಗಿ ಆಗಮಿಸಿದ್ದಾರೆ. ಇನ್ನೂ ಎರಡು ಮೂರು ದಿನ ಇಲ್ಲಿಯೇ ಇರುತ್ತಾರೆ. ಅವರೊಂದಿಗೆ ಜಾಹೀರಾತು ಮಾಡುವ ಇಬ್ಬರು ತಾಂತ್ರಿಕ ಸಿಬ್ಬಂದಿ ಮತ್ತು ಇಬ್ಬರು ಸೆಕ್ಯೂರಿಟಿ ಗಾರ್ಡ್ಗಳು ಮಾತ್ರ ಇದ್ದಾರೆ.
ಕೋವಿಡ್ ಮುಂಜಾಗ್ರತೆಯಿಂದ ಸಾಮಾಜಿಕ ಅಂತರ, ಮಾಸ್ಕ್ ಧರಿಸಿಕೊಂಡು ಇದ್ದಾರೆ. ಸಾರ್ವಜನಿಕರೊಂದಿಗೆ ಯಾವುದೇ ಪೋಟೊ ಸಹ ತೆಗೆಸಿಕೊಳ್ಳುತ್ತಿಲ್ಲ, ಯಾರೂ ಜಿಂದಾಲ್ಗೆ ಬರಬೇಡಿ ಎನ್ನುವ ಮಾಹಿತಿ ಸಹ ತಿಳಿಸಿದ್ದಾರೆ ಎಂದರು.
ಕೆ.ಎಲ್. ರಾಹುಲ್ ಜಿಂದಾಲ್ ವೀಕ್ಷಣೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.