ಕರ್ನಾಟಕ

karnataka

ETV Bharat / city

ಬಳ್ಳಾರಿ: ಉತ್ತರಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಹೊರಟ ವಲಸೆ ಕಾರ್ಮಿಕರಿಗೆ ಕೌನ್ಸೆಲಿಂಗ್​

ಬಳ್ಳಾರಿಯಿಂದ ಸಂಗನಕಲ್ಲು ಮಾರ್ಗವಾಗಿ ರಾತ್ರೋರಾತ್ರಿ ಕಾಲ್ನಡಿಗೆಯಲ್ಲೇ ಉತ್ತರಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದ ವಲಸೆ ಕಾರ್ಮಿಕರ ಬಗ್ಗೆ ಮಾಹಿತಿ ಪಡೆದ ಬಳ್ಳಾರಿ ಗ್ರಾಮಾಂತರ ಠಾಣೆಯ ಪೊಲೀಸರು ಹಾಗೂ ಶಾಸಕ ಬಿ.ನಾಗೇಂದ್ರ ಅವರು, ಕಾರ್ಮಿಕರನ್ನ ತಡೆದು ಕೌನ್ಸೆಲಿಂಗ್​​ಗೆ ಒಳಪಡಿಸಿದ್ದಾರೆ.

Counseling of migrant workers In Bellary
ಉತ್ತರಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಹೊರಟ ವಲಸೆ ಕಾರ್ಮಿಕರನ್ನ ತಡೆದು ಕೌನ್ಸಿಲಿಂಗ್

By

Published : May 6, 2020, 8:14 AM IST

ಬಳ್ಳಾರಿ: ಮೂರನೇ ಹಂತದ ಲಾಕ್​ಡೌನ್ ಜಾರಿಯಾದ ಹಿನ್ನೆಲೆ, ಗಣಿ ನಗರಿ ಬಳ್ಳಾರಿಯ ನಾನಾ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉತ್ತರಪ್ರದೇಶ ಮೂಲದ ವಲಸೆ ಕಾರ್ಮಿಕರು ರಾತ್ರೋರಾತ್ರಿ ತಮ್ಮ ರಾಜ್ಯ ತಲುಪಲು ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದು,ಅವರನ್ನ ತಡೆದು ಕೌನ್ಸೆಲಿಂಗ್​​​ಗೆ ಒಳಪಡಿಸಲಾಗಿದೆ.

ಇವರು ಬಳ್ಳಾರಿಯಿಂದ ಸಂಗನಕಲ್ಲು ಮಾರ್ಗವಾಗಿ ಕಾಲ್ನಡಿಗೆಯಲ್ಲೇ ತಮ್ಮ ರಾಜ್ಯಕ್ಕೆ ಪ್ರಯಾಣ ಬೆಳೆಸಿರುವುದರ ಬಗ್ಗೆ ಮಾಹಿತಿ ಪಡೆದ ಬಳ್ಳಾರಿ ಗ್ರಾಮಾಂತರ ಠಾಣೆಯ ಪೊಲೀಸರು ಹಾಗೂ ಶಾಸಕ ಬಿ.ನಾಗೇಂದ್ರ ಅವರು, ಕಾರ್ಮಿಕರನ್ನ ತಡೆದು ಕೌನ್ಸೆಲಿಂಗ್​​ಗೆ ಒಳಪಡಿಸಿದ್ದಾರೆ. ಈ ಕಾರ್ಮಿಕರು ಬಳ್ಳಾರಿಯಿಂದ ಉತ್ತರ ಪ್ರದೇಶದ ಗೋರಕ್​ಪುರಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದರು.

ಬಳ್ಳಾರಿ ನಗರ ತೊರೆದು ಕಾಲ್ನಡಿಗೆಯಲ್ಲಿ ಹೊರಟಿರುವ ಈ ಕಾರ್ಮಿಕರಿಗೆ, ಜಿಲ್ಲಾಡಳಿತದಿಂದ ಪಾಸ್ ಕೊಡಿಸುವುದಾಗಿ ಹೇಳಿ ಉತ್ತರ ಪ್ರದೇಶ ಮೂಲದ ಗುತ್ತಿಗೆದಾರರೊಬ್ಬರು ಮೋಸ ಮಾಡಿದ್ದಾರೆಂದು ಕಾರ್ಮಿಕರು ದೂರಿದ್ದಾರೆ.‌ ಇದಲ್ಲದೇ, ಗುತ್ತಿಗೆದಾರ ಯುವಕರಿಗೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಹೆದರಿ ಬಳ್ಳಾರಿ ನಗರ ತೊರೆಯಲು ನಿರ್ಧರಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details