ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ನಿಂದ ಎನ್ ಪಿಆರ್ ಗಣತಿ ಕಾರ್ಯಕ್ಕೆ ಮುಂದಾಗುವ ಶಿಕ್ಷಕ ವೃಂದಕ್ಕೆ ಮಾಸ್ಕ್ ನೀಡಿ, ಇಲ್ಲವೇ ಗಣತಿಕಾರ್ಯ ಮುಂದೂಡಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಾಸ್ಕ್ ಕೊಡಿ, ಇಲ್ಲವೇ ಎನ್ಪಿಆರ್ ಮುಂದೂಡಿ... ಶಿಕ್ಷಣ ಸಚಿವರಿಗೆ ಪ್ರಗತಿಪರರ ಪತ್ರ
ಕೊರೊನಾ ವೈರಸ್ ಎಫೆಕ್ಟ್ ನಿಂದ ಎನ್ ಪಿಆರ್ ಗಣತಿ ಕಾರ್ಯಕ್ಕೆ ಮುಂದಾಗುವ ಶಿಕ್ಷಕ ವೃಂದಕ್ಕೆ ಮಾಸ್ಕ್ ನೀಡಿ ಇಲ್ಲವೇ ಗಣತಿಕಾರ್ಯ ಮುಂದೂಡಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೊರೊನಾ ವೈರಸ್ ಎಫೆಕ್ಟ್, ಎನ್ ಪಿಆರ್ ಗಣತಿಕಾರ್ಯ ಮುಂದೂಡುವಂತೆ ಸರ್ಕಾರಕ್ಕೆ ಒತ್ತಾಯ..!
ಈ ಸಂಬಂಧ ಶಿಕ್ಷಣ ಸಚಿವ ಸುರೇಶ್ಕುಮಾರ ಅವರಿಗೆ ಬಳ್ಳಾರಿಯ ಪ್ರಗತಿಪರರು, ಸಮಾನ ಮನಸ್ಕರು ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಈ ಕೊರೊನಾ ವೈರಸ್ ಸಾಕಷ್ಟು ವೇಗವಾಗಿ ವಿಶ್ವವ್ಯಾಪ್ತಿ ಹರಡುತ್ತಿದೆ. ಮಹಾಮಾರಿ ಕೊರೊನಾ ವೈರಸ್ ನಿಂದ ಶಿಕ್ಷಕ ವೃಂದ ಅನಾಹುತಕ್ಕೆ ಸಿಲುಕಬಾರದು. ಮಾರ್ಚ್ ತಿಂಗಳು ಮುಗಿದ ಬಳಿಕ ಏಪ್ರಿಲ್-ಮೇ ತಿಂಗಳಲ್ಲಿ ಎನ್ ಪಿಆರ್ ಗಣತಿಗೆ ಶಿಕ್ಷಕ ವೃಂದ ತೆರಳುತ್ತದೆ. ಕೊರೊನಾ ಮಹಾಮಾರಿ ರಾಜ್ಯದಿಂದ ತೊಲಗುವವರೆಗೆ ಈ ಎನ್ ಪಿಆರ್ ಗಣತಿ ಕಾರ್ಯವನ್ನು ಮುಂದೂಡಿ, ಶಿಕ್ಷಕ ವೃಂದವನ್ನು ಕಾಪಾಡಿ ಎಂದು ಬಹಿರಂಗವಾಗಿ ಪತ್ರ ಬರೆದಿದ್ದಾರೆ.