ಕರ್ನಾಟಕ

karnataka

ETV Bharat / city

ಜಿಂದಾಲ್​​​ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ: ಸೋಮವಾರ ತುರ್ತು ಸಭೆ - Anand singh, Ballary district in-charge minister

ಜಿಂದಾಲ್​ ಕಂಪನಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕಂಪನಿಯ ಮುಖ್ಯಸ್ಥರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳನ್ನೊಳಗೊಂಡ ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್​​ ಹೇಳಿದರು.

coronavirus increase in jindal company
ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್

By

Published : Jun 19, 2020, 5:12 PM IST

ಬಳ್ಳಾರಿ:ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್​ನಲ್ಲಿ ಕೋವಿಡ್​​-19 ಪ್ರಕರಣಗಳು ಏರುತ್ತಿರುವುದರಿಂದ ಜಿಲ್ಲೆಯ ಜನರು ಭಯಭೀತರಾಗಿದ್ದಾರೆ. ಹೀಗಾಗಿ, ಕಂಪನಿಯ ಮುಖ್ಯಸ್ಥರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳನ್ನೊಳಗೊಂಡ ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು.

ಸೀಲ್​​​​​​ಡೌನ್ ಮಾಡುವುದರ ಕುರಿತು ನಿರ್ಧಾರ

ಮೈಸೂರಿನ‌ ಜುಬಿಲಂಟ್ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಮೂಲಕ ಸೋಂಕು ಮುಕ್ತ ಮಾಡಲಾಯಿತು. ಅದರಂತೆ ಜಿಂದಾಲ್​​ ಅನ್ನು ಕೊರೊನಾ ಮುಕ್ತ ಮಾಡುವ ನಿರ್ಧಾರ ಕೈಗೊಳ್ಳುತ್ತೇವೆ. ಹೀಗಾಗಿ, ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರೊಂದಿಗೆ ಚರ್ಚಿಸಿರುವೆ ಎಂದು ಮಾಹಿತಿ ನೀಡಿದರು.

ಜಿಂದಾಲ್​ ಕಂಪನಿಯ ಲಾಕ್​ ಡೌನ್​ ಕುರಿತು ಸೋಮವಾರ ತುರ್ತು ಸಭೆ ​​

ಜಿಂದಾಲ್ ವಿಚಾರವಾಗಿ ಯಾವುದೇ ಮೃದುಧೋರಣೆ ತಾಳಲ್ಲ. ಕೊರೊನಾ ಸೋಂಕಿತರನ್ನ‌ ಹರಡುಸುವ ಕಾರ್ಖಾನೆಯಂತೂ ಅಲ್ಲ.‌ ಈ ಕೊರೊನಾ ಯಾರಿಂದ ಯಾರಿಗೆ ಹರಡಲಿದೆ ಎಂಬುದೇ ವೈದ್ಯರಿಗೆ ಗೊತ್ತಿಲ್ಲ. ಹೀಗಾಗಿ, ಜಿಂದಾಲ್ ಕಂಪನಿಯನ್ನು ಸ್ಪಲ್ಪದಿನದ ಮಟ್ಟಿಗೆ ಲಾಕ್​​​ಡೌನ್ ಮಾಡುವ ವಿಚಾರ ಕುರಿತು ಚರ್ಚಿಸಲಾಗುವುದು ಎಂದರು.

ABOUT THE AUTHOR

...view details