ಹೊಸಪೇಟೆ: ಕೊರೊನಾ ಕರಿನೆರಳು ವಿಶ್ವ ಪ್ರಸಿದ್ಧ ಹಂಪೆಯ ಮೇಲೂ ಬಿದ್ದಿದ್ದು, ಸದಾ ದೇಶಿ/ವಿದೇಶಿ ಪ್ರವಾಸಿಗರಿಂದ ತುಂಬಿರುತ್ತಿದ್ದ ಐತಿಹಾಸಿಕ ತಾಣ ಸದ್ಯ ಜನರಿಲ್ಲದೆ ಬಿಕೋ ಎನ್ನುತ್ತಿದೆ.
ಕೊರೊನಾ ಕರಿನೆರಳು: ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ ವಿಶ್ವ ಪ್ರಸಿದ್ಧ ಹಂಪಿ - ಹಂಪಿಯ ಮೇಲೆ ಕೊರೊನಾ ಪರಿಣಾಮ
ಗತ ವೈಭವಕ್ಕೆ ಸಾಕ್ಷಿಯಾಗಿದ್ದ ವಿಜಯನಗರ ಹಂಪಿ ಎಂದೂ ಈ ರೀತಿಯ ಪ್ರವಾಸಿಗ ಬರವನ್ನು ಅನುಭವಿಸಿದ್ದಿಲ್ಲ, ಸದ್ಯ ಕೊರೊನಾ ಭೀತಿಯಿಂದ ಪ್ರವಾಸಿಗರಿಲ್ಲದೆ ಹಂಪಿ ಬರೀದಾಗಿ ಬಣಗುಡುತ್ತಿದೆ.
ವಿಶ್ವ ಪ್ರಸಿದ್ಧ ಹಂಪಿ
ದೇಶದಲ್ಲಿ ಕೊರೊನಾ ವೈರಸ್ ಭಯ ಹುಟ್ಟಿಸಿದ್ದು, ಜನ ಮನೆಬಿಟ್ಟು ಹೊರಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಹಂಪಿಯಲ್ಲಿಯೂ ಕೂಡಾ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ.
ಗತ ವೈಭವಕ್ಕೆ ಸಾಕ್ಷಿಯಾಗಿದ್ದ ವಿಜಯನಗರ ಹಂಪಿ ಎಂದೂ ಈ ರೀತಿಯ ಪ್ರವಾಸಿಗ ಬರವನ್ನು ಅನುಭವಿಸಿದ್ದಿಲ್ಲ. ಸದ್ಯ ಕೊರೊನಾ ಭೀತಿಯಿಂದ ಪ್ರವಾಸಿಗರಿಲ್ಲದೆ ಹಂಪಿ ಬಣಗುಡುತ್ತಿದೆ.
Last Updated : Mar 15, 2020, 7:04 AM IST