ಹೊಸಪೇಟೆ:ಹಲವು ತಿಂಗಳಿಂದ ಇಳಿಮುಖವಾಗಿದ್ದ ಕೊರೊನಾ ಪ್ರಕರಣಗಳು ಇದೀಗ ಮತ್ತೆ ಹೆಚ್ಚಾಗುತ್ತಿದ್ದು, ಎರಡನೇಯ ಅಲೆಯ ಆತಂಕ ಶುರುವಾಗಿದೆ.
ಕಳೆದ ಎರಡು ದಿನಗಳಲ್ಲಿ 29 ಲೋಕೋ ಪೈಲಟ್ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ ಐವರುಟ್ರಾಮಾ ಕೇರ್ ಸೆಂಟರ್ನಲ್ಲಿ, ಮೂವರು ಹುಬ್ಬಳ್ಳಿಯಲ್ಲಿ ಹಾಗೂ 21 ಸಿಬ್ಬಂದಿ ಹೋಂ ಐಸೋಲೇಶನ್ಗೆ ಒಳಗಾಗಿದ್ದಾರೆ. ಲೋಕೋ ಪೈಲಟ್ಗಳು ತಂಗಿದ್ದ ಹೊಸಪೇಟೆಯಲ್ಲಿನ ಕಟ್ಟಡವನ್ನು ಶೀಲ್ ಡೌನ್ ಮಾಡಲಾಗಿದ್ದು, ಈ ಪ್ರದೇಶವನ್ನು ಕಂಟೋನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ.
ರೈಲು ಸಿಬ್ಬಂದಿಗೆ ಕೊರೊನಾ ಬಂದಿದ್ದು ಹೇಗೆ?: ನೂತನ ಲೋಕೋ ಪೈಲಟ್ಗಳು ಮಾ. 3ರಂದು ನಗರಕ್ಕೆ ಆಗಮಿಸಿದ್ದು, ಬಳಿಕ ಅವರನ್ನು ಬೇರೆ ಬೇರೆ ಕೆಲಸಗಳಿಗೆ ನಿಯೋಜಿಸಲಾಗಿತ್ತು. ಎರಡು ದಿನದ ಬಳಿಕ ಒಬ್ಬರಲ್ಲಿ ಕೊರೊನಾ ಗುಣಲಕ್ಷಣ ಕಂಡುಬಂದಿದ್ದು, ಅವರನ್ನು ಪರೀಕ್ಷೆಗೊಳಪಡಿಸಿದಾಗ ಕೊರೊನಾ ಸೋಂಕು ಪತ್ತೆಯಾಗಿದೆ. ಬಳಿಕ ಅವರ ಪ್ರಾಥಮಿಕ ಸಂಪರ್ಕದಲ್ಲಿವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಟ್ಟು 29 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನೂ 50 ಜನರ ಪರೀಕ್ಷೆಯ ವರದಿ ಬರಬೇಕಾಗಿದೆ.