ಕರ್ನಾಟಕ

karnataka

ETV Bharat / city

ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ 1,823 ಸೋಂಕಿತರು ಪತ್ತೆ: 28 ಮಂದಿ ಸಾವು - Vijayanagar Corona Case

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಂಗಳವಾರ ಪತ್ತೆಯಾದ ಕೋವಿಡ್‌ ಸೋಂಕು ಪ್ರಕರಣಗಳ ಮಾಹಿತಿ ಇಲ್ಲಿದೆ..

Bellary
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ 1,823 ಸೋಂಕಿತರು ಪತ್ತೆ

By

Published : May 19, 2021, 7:00 AM IST

ಬಳ್ಳಾರಿ: ಉಭಯ ಗಣಿ ಜಿಲ್ಲೆಗಳಲ್ಲಿ ಮಂಗಳವಾರ 1,799 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದರೆ, 28 ಮಂದಿ ಮೃತಪಟ್ಟಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 78,527ಕ್ಕೆ ಏರಿಕೆಯಾಗಿದೆ. ಎರಡೂ ಜಿಲ್ಲೆಗಳಲ್ಲಿ ಮೃತರ ಸಂಖ್ಯೆ 1,118 ತಲುಪಿದೆ.

ನಿನ್ನೆ 854 ಜನರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 57,119 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದಂತಾಗಿದೆ. ಸದ್ಯ 20,290 ಸಕ್ರಿಯ ಪ್ರಕರಣಗಳಿವೆ.

ತಾಲೂಕುವಾರು ವಿವರ:
ಬಳ್ಳಾರಿ 587, ಸಂಡೂರು 230, ಸಿರುಗುಪ್ಪ 95, ಹೊಸಪೇಟೆ 416, ಎಚ್.ಬಿ.ಹಳ್ಳಿ 88, ಕೂಡ್ಲಿಗಿ 125, ಹರಪನಹಳ್ಳಿ 135, ಹಡಗಲಿಯ 105 , ಹೊರ ರಾಜ್ಯದ 8 ಹಾಗು ಹೊರ ಜಿಲ್ಲೆಯಿಂದ ಬಂದ 10 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದನ್ನೂ ಓದಿ:2020-21ರ ಆರ್ಥಿಕ ವರ್ಷದಲ್ಲಿ ಕೆನರಾ ಬ್ಯಾಂಕ್ ಲಾಭದಲ್ಲಿ ಭಾರಿ ಇಳಿಕೆ

ABOUT THE AUTHOR

...view details