ಹೊಸಪೇಟೆ (ಬಳ್ಳಾರಿ):ಈಟಿವಿ ಭಾರತ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಕಂಪ್ಲಿ ಸೇತುವೆಗೆ ಕಬ್ಬಿಣ ಸಲಾಕೆಗಳ ಮೂಲಕ ತಡೆಗೋಡೆ ನಿರ್ಮಿಸಿದ್ದಾರೆ.
ಕಂಪ್ಲಿ ಸೇತುವೆಗೆ ಕಬ್ಬಿಣದ ತಡೆಗೋಡೆ ನಿರ್ಮಾಣ ನವೆಂಬರ್ 24ರಂದು ಈಟಿವಿ ಭಾರತ 'ಸಮಸ್ಯೆಗಳ ಗೂಡಾದ ಕಂಪ್ಲಿ ಸೇತುವೆ: ಪರಿಹಾರಕ್ಕಾಗಿ ಸಾರ್ವಜನಿಕರು ಮನವಿ' ಎಂಬ ತಲೆಬರಹದಡಿ ವಿಸ್ತೃತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಕಂಪ್ಲಿ ಸೇತುವೆಗೆ ಕಬ್ಬಿಣ ಸಲಾಕೆಗಳ ಮೂಲಕ ತಡೆಗೋಡೆಯನ್ನು ನಿರ್ಮಿಸಿದ್ದಾರೆ.
ಓದಿ:ಸಮಸ್ಯೆಗಳ ಗೂಡಾದ ಕಂಪ್ಲಿ ಸೇತುವೆ: ಪರಿಹಾರಕ್ಕಾಗಿ ಸಾರ್ವಜನಿಕರ ಮನವಿ
ಈ ಸೇತುವೆ ಗಂಗಾವತಿ ಹಾಗೂ ಕಂಪ್ಲಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ ಪ್ರತಿ ದಿನ ಸಾವಿರಾರು ವಾಹನಗಳು ಸೇತುವೆ ಮೂಲಕ ಸಂಚರಿಸುತ್ತವೆ. ಕಾಲಮಾನಕ್ಕೆ ತಕ್ಕಂತೆ ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವಂತ ಕಾರ್ಯವಾಗಿರಲಿಲ್ಲ. ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಕಬ್ಬಿಣ ಸಲಾಕೆಗಳು ಕಿತ್ತು ಹೋಗಿದ್ದವು. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಭಯದಿಂದ ಓಡಾಡುವ ಪರಿಸ್ಥಿತಿ ಎದುರಾಗಿತ್ತು.