ಹೊಸಪೇಟೆ (ವಿಜಯನಗರ): ಅಂಜನಾದ್ರಿಯಲ್ಲೇ ಆಂಜನೇಯ ಜನಿಸಿದ್ದು, ಈ ಕುರಿತು ಇತಿಹಾಸದಲ್ಲಿ ಪುರಾವೆಗಳಿವೆ. ರಾಮಾಯಣದಲ್ಲಿ ಅಂಜನಾದ್ರಿಯನ್ನು ಹನುಮನ ಜನ್ಮಸ್ಥಳ ಎಂದು ಉಲ್ಲೇಖಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.
ಈ ಕುರಿತುತಾಲೂಕಿನ ಕಮಲಾಪುರದ ಮಯೂರು ಭುವನೇಶ್ವರಿ ಹೋಟೆಲ್ನಲ್ಲಿಂದುಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐತಿಹಾಸಕ ಸ್ಥಳದ ಬಗ್ಗೆ ಆಕ್ಷೇಪಣೆಗಳು ಬರುತ್ತವೆ, ಹೋಗುತ್ತವೆ. ನೂರಕ್ಕೂ ನೂರರಷ್ಟು ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯೇ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಅಟಲ್ ಬಿಹಾರಿ ವಾಜಪೇಯಿ ಜ್ಯೂಲಾಜಿಕಲ್ ಪಾರ್ಕ್ ಎದುರು 18 ರಿಂದ 20 ಕೋಟಿ ರೂ. ವೆಚ್ಚದ ತ್ರಿ ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ನಿರ್ಣಯ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವರು ಮಾಹಿತಿ ನೀಡಿದರು.
ಸಚಿವ ಸಿ.ಪಿ.ಯೋಗೇಶ್ವರ್ ಮಾಹಿತಿ ಹಂಪಿಯಲ್ಲಿ ತ್ರಿ ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಪುರಾತತ್ವ ಇಲಾಖೆಯ ಅಡೆತಡೆ ಇದೆ. ಹಾಗಾಗಿ ಮೃಗೋದ್ಯಾನ ಎದುರು ನಿರ್ಮಾಣ ಮಾಡಲಾಗುತ್ತಿದೆ. ಶೀಘ್ರವಾಗಿ ಶಿಲನ್ಯಾಸ ನೆರವೇರಿಸಲಾಗುವುದು ಎಂದು ತಿಳಿಸಿದರು.
ಹಂಪಿಯಲ್ಲಿ 1,000 ಮಕ್ಕಳು ಉಳಿದುಕೊಳ್ಳುವ ವಸತಿ ವ್ಯವಸ್ಥೆ ಒದಗಿಸಲು ಈಗಾಗಲೇ ತೀರ್ಮಾನ ಮಾಡಲಾಗಿದೆ. ಕಡಿಮೆ ದರದಲ್ಲಿ ಮಕ್ಕಳಿಗೆ ಈ ಸೌಲಭ್ಯವನ್ನು ಮಾಡಲಾಗುವುದಿಲ್ಲ. ಸದ್ಯದಲ್ಲೇ ಭೂಮಿ ಪೂಜೆ ನೆರವೇರಿಸಲಾಗುವುದು. ಇದರಿಂದ ಮಕ್ಕಳಿಗೆ ಭವ್ಯ ವಿಜಯನಗರ ಸಾಮ್ರಾಜ್ಯದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
250 ಎಕರೆಯಲ್ಲಿ ಥೀಮ್ ಪಾರ್ಕ್ ಹಾಗೂ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುವುದು. ಇರುವ ಜಾಗವನ್ನೇ ಬಳಸಿಕೊಳ್ಳಲಾಗುತ್ತದೆ. ಅರಣ್ಯ ನಾಶವಾಗುವುದಿಲ್ಲ ಎಂದು ಸಚಿವರು ತಿಳಿಸಿದರು.