ಕರ್ನಾಟಕ

karnataka

ETV Bharat / city

ಬಳ್ಳಾರಿ ಮಹಾನಗರ ಪಾಲಿಕೆ 'ಕೈ'ವಶ: ಬಿಜೆಪಿಗೆ ಮುಖಭಂಗ - ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ,

ಈ ಬಾರಿ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್​ಗೆ ಗೆಲುವಾಗಿದೆ. ಈ ಮೂಲಕ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ.

Congress won, Congress won in Bellary municipality election, Bellary municipality election, Bellary municipality election news, ಕಾಂಗ್ರೆಸ್​ ಗೆಲುವು, ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಗೆಲುವು, ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ, ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಸುದ್ದಿ,
ಬಳ್ಳಾರಿ ಮಹಾನಗರ ಪಾಲಿಕೆ

By

Published : Apr 30, 2021, 12:32 PM IST

Updated : Apr 30, 2021, 3:21 PM IST

ಬಳ್ಳಾರಿ:ತೀವ್ರ ಕುತೂಹಲ ಮೂಡಿಸಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. 39 ವಾರ್ಡ್​ಗಳ ಪೈಕಿ ಕಾಂಗ್ರೆಸ್​ ಅತಿ ಹೆಚ್ಚು 21 ಸ್ಥಾನ ಪಡೆದರೆ, ಬಿಜೆಪಿ 13 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಇನ್ನುಳಿದಂತೆ 5 ಸ್ಥಾನಗಳು ಪಕ್ಷೇತರರ ಪಾಲಾಗಿವೆ.

ಜಿ.ಸೋಮಶೇಖರ ರೆಡ್ಡಿ ಪುತ್ರನಿಗೆ ಸೋಲು

18 ನೇ ವಾರ್ಡ್​ನಲ್ಲಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಪುತ್ರ ಶ್ರವಣಕುಮಾರ್ ರೆಡ್ಡಿಗೆ ಸೋಲಾಗಿದೆ. ಈ ಮೂಲಕ ಶಾಸಕರಿಗೆ ಹಿನ್ನಡೆಯಾಗಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ನಂದೀಶ 128 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ಮತ ಎಣಿಕೆ ಕಾರ್ಯ

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬೆಳಗ್ಗೆ ಮತ ಎಣಿಕೆ ಕಾರ್ಯ ಶುರುವಾಗಿತ್ತು. ಮಹಾನಗರ‌‌ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಎಎಸ್​​​​ಪಿ ಬಿ.ಎನ್.ಲಾವಣ್ಯ, ಎಸಿ ರಮೇಶ ಕೋನರೆಡ್ಡಿ ಹಾಗೂ ಮಹಾನಗರ ಪಾಲಿಕೆ ಅಭ್ಯರ್ಥಿಗಳ ಸಮಕ್ಷಮದಲ್ಲಿ ಮತಯಂತ್ರಗಳಿದ್ದ ಸ್ಟ್ರಾಂಗ್ ರೂಮ್ ತೆರೆಯಲಾಗಿತ್ತು. ಮೂರ್ನಾಲ್ಕು ಕೊಠಡಿಗಳಲ್ಲಿ ಈ ಮತ ಯಂತ್ರೋಪಕರಣಗಳನ್ನು ಇಡಲಾಗಿದ್ದು, ಸ್ಟ್ರಾಂಗ್ ರೂಮ್ ಓಪನ್ ಆದ ಬಳಿಕ ಮತ ಎಣಿಕೆ ನಡೆದಿದೆ.

ಕಾಂಗ್ರೆಸ್- 21, ಬಿಜೆಪಿ- 13, ಪಕ್ಷೇತರ- 05

1ನೇ ವಾರ್ಡ್- ಹನುಮಂತ (ಬಿಜೆಪಿ)

2ನೇ ವಾರ್ಡ್- ಈರಮ್ಮ ಸೂರಿ (ಬಿಜೆಪಿ)

03ನೇ ವಾರ್ಡ್- ಎಂ.ಪ್ರಭಂಜನ್ (ಪಕ್ಷೇತರ)

04ನೇ ವಾರ್ಡ್- ಡಿ.ತ್ರಿವೇಣಿ (ಕಾಂಗ್ರೆಸ್)

05ನೇ ವಾರ್ಡ್- ರಾಜಶೇಖರ (ಕಾಂಗ್ರೆಸ್)

6ನೇ ವಾರ್ಡ್- ಎಂ.ಕೆ.ಪದ್ಮರೋಜ (ಕಾಂಗ್ರೆಸ್)

7ನೇ ವಾರ್ಡ್- ಉಮಾದೇವಿ (ಕಾಂಗ್ರೆಸ್)

8ನೇ ವಾರ್ಡ್- ಎಂ.ರಾಮಾಂಜನೇಯ (ಕಾಂಗ್ರೆಸ್)

09ನೇ ವಾರ್ಡ್- ಜಬ್ಬರ್ ಸಾಬ್ (ಕಾಂಗ್ರೆಸ್)

10ನೇ ವಾರ್ಡ್- ಕೋನಂಕಿ ತಿಲಕ (ಬಿಜೆಪಿ)

11ನೇ ವಾರ್ಡ್- ಗೋವಿಂದ ರಾಜು (ಬಿಜೆಪಿ)

12ನೇ ವಾರ್ಡ್- ಚೇತನ ವೇಮಣ್ಣ (ಬಿಜೆಪಿ)

13ನೇ ವಾರ್ಡ್- ಇಬ್ರಾಹಿಂ (ಬಿಜೆಪಿ)

14ನೇ ವಾರ್ಡ್- ಬಿ.ರತ್ನಮ್ಮ (ಕಾಂಗ್ರೆಸ್)

15ನೇ ವಾರ್ಡ್- ಮೊಹಮ್ಮದ್ ನೂರ (ಪಕ್ಷೇತರ)

16ನೇ ವಾರ್ಡ್- ನಾಗರತ್ನ ಪ್ರಸಾದ (ಬಿಜೆಪಿ)

17ನೇ ವಾರ್ಡ್- ಕವಿತಾ ಹೊನ್ನಪ್ಪ (ಪಕ್ಷೇತರ)

18ನೇ ವಾರ್ಡ್- ಎಂ.ನದೀಶ (ಕಾಂಗ್ರೆಸ್)

19ನೇ ವಾರ್ಡ್- ಕೆ.ಎಸ್.ಅಶೋಕ (ಬಿಜೆಪಿ)

20ನೇ ವಾರ್ಡ್- ಪಿ.ವಿವೇಕ (ಕಾಂಗ್ರೆಸ್)

21ನೇ ವಾರ್ಡ್- ಸುರೇಖಾ ಮಲ್ಲನಗೌಡ (ಬಿಜೆಪಿ)

22ನೇ ವಾರ್ಡ್- ಹನುಮಂತಪ್ಪ (ಬಿಜೆಪಿ)

23ನೇ ವಾರ್ಡ್- ಪಿ.ಗಾದೆಪ್ಪ (ಕಾಂಗ್ರೆಸ್)

24ನೇ ವಾರ್ಡ್- ಶ್ರೀನಿವಾಸ ಮೋತ್ಕರ (ಬಿಜೆಪಿ)

25ನೇ ವಾರ್ಡ್- ಎಂ.ಗೋವಿಂದ ರಾಜುಲು (ಬಿಜೆಪಿ)

26ನೇ ವಾರ್ಡ್- ಡಿ.ಸುಕುಂ (ಕಾಂಗ್ರೆಸ್)

27ನೇ ವಾರ್ಡ್- ನಿಯಾಜಾ ಅಹಮದ್ (ಕಾಂಗ್ರೆಸ್)

28ನೇ ವಾರ್ಡ್- ಬಿ.ಮುಬೀನಾ (ಕಾಂಗ್ರೆಸ್)

29ನೇ ವಾರ್ಡ್- ಜಿ.ಶಿಲ್ಪ (ಕಾಂಗ್ರೆಸ್)

30ನೇ ವಾರ್ಡ್- ಎನ್.ಎಂ.ಡಿ.ಆಸೀಫ್ ಬಾಷಾ (ಕಾಂಗ್ರೆಸ್)

31ನೇ ವಾರ್ಡ್- ಬಿ.ಶ್ವೇತಾ (ಕಾಂಗ್ರೆಸ್)

32ನೇ ವಾರ್ಡ್- ಮಂಜುಳಾ ಉಮಾಪತಿ (ಪಕ್ಷೇತರ)

33ನೇ ವಾರ್ಡ್- ಬಿ.ಜಾನಕಿ (ಕಾಂಗ್ರೆಸ್)

34ನೇ ವಾರ್ಡ್- ರಾಜೇಶ್ವರಿ (ಕಾಂಗ್ರೆಸ್)

35ನೇ ವಾರ್ಡ್- ಮಿಂಚು ಶ್ರೀನಿವಾಸ (ಪಕ್ಷೇತರ)

36ನೇ ವಾರ್ಡ್- ಕಲ್ಪನಾ ಪಿ (ಬಿಜೆಪಿ)

37ನೇ ವಾರ್ಡ್- ಮಾಲನ್ ಬೀ (ಕಾಂಗ್ರೆಸ್)

38ನೇ ವಾರ್ಡ್- ಕುಬೇರ (ಕಾಂಗ್ರೆಸ್)

39ನೇ ವಾರ್ಡ್- ಪಿ.ಶಶಿಕಲಾ (ಕಾಂಗ್ರೆಸ್)

Last Updated : Apr 30, 2021, 3:21 PM IST

ABOUT THE AUTHOR

...view details