ಬಳ್ಳಾರಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲ ಬಳಿ ಬೂಟ್ ಅನ್ನು ತಂದಿಡುವ ಮೂಲಕ ಅನರ್ಹ ಶಾಸಕ ಆನಂದ್ ಸಿಂಗ್ ಸ್ವಾಮಿ ನಿಷ್ಠೆ ತೋರಿದ್ದಾರೆ.
ಮಾಜಿ ಶಾಸಕ ಜಿ.ಶಂಕರಗೌಡರ ಮನೆಗೆ ಭೇಟಿ ನೀಡಿದ ಸಿಎಂ ಹೌದು, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಆನಂದ್ ಸಿಂಗ್ ಪರ ಸಿಎಂ ಯಡಿಯೂರಪ್ಪ ಉಪ ಚುನಾವಣಾ ಪ್ರಚಾರಕ್ಕಾಗಮಿಸಿದ್ದರು. ಹೊಸಪೇಟೆ ನಗರಕ್ಕಾಗಮಿಸಿ ಸಿಎಂ ನೇರವಾಗಿ ಕೊಟ್ಟೂರು ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲಿ ಮೂಲ ಗದ್ದುಗೆ ದರ್ಶನ ಪಡೆದ ಬಳಿಕ, ಕೊಟ್ಟೂರು ಸ್ವಾಮಿ ಮಠದ ಸಂಗನಬಸವ ಸ್ವಾಮೀಜಿಯವರ ಕುಶಲೋಪರಿ ವಿಚಾರಿಸಿದರು.
ನಂತರ ಮಾಜಿ ಶಾಸಕ ಜಿ.ಶಂಕರಗೌಡರ ಮನೆಗೆ ಭೇಟಿ ನೀಡಿ ಅವರ ಪುತ್ರ ಭರಮನಗೌಡರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದರು. ಬಳಿಕ ಹೊರ ಹೋಗುತ್ತಿದ್ದಂತೆಯೇ ಮೊಬೈಲ್ ನಲ್ಲಿ ಮಾತನಾಡುತ್ತ ಮುನ್ನಡೆದ ಆನಂದಸಿಂಗ್ ಅವರು, ಪ್ರವೇಶದ್ವಾರದ ಬಳಿಯಿದ್ದ ಬೂಟ್ಅನ್ನು ಕೈಯಿಂದ ಹಿಡಿದು ಸಿಎಂ ಕಾಲಿನತ್ತ ತಂದಿಟ್ಟರು. ಆಗ ಸಿಎಂ ತಮ್ಮ ಎರಡು ಕಾಲುಗಳನ್ನು ಬೂಟಿನೊಳಗೆ ತೂರಿಸಿದರು.
ಮಾಜಿ ಶಾಸಕ ಜಿ.ಶಂಕರಗೌಡರ ಮನೆಗೆ ಭೇಟಿ ನೀಡಿದ ಸಿಎಂ ಈ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.