ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಅಗ್ನಿಶಾಮಕ ಮತ್ತು ಗೃಹರಕ್ಷಕ ದಳದ ಹತ್ತು ಮಂದಿ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.
ಬಳ್ಳಾರಿ: ಅಗ್ನಿಶಾಮಕ- ಗೃಹರಕ್ಷಕ ದಳದ 10 ಮಂದಿಗೆ ಸಿಎಂ ಚಿನ್ನದ ಪದಕ ಪ್ರದಾನ - CM Gold Medal givened to bellary 10 employees
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಅಗ್ನಿಶಾಮಕ ಮತ್ತು ಗೃಹರಕ್ಷಕ ದಳದ ಹತ್ತು ಮಂದಿ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ವಾಹನ ಚಾಲಕ ಸೂಗನಗೌಡ, ಸಿಬ್ಬಂದಿ ಯಲ್ಲಪ್ಪ ಪೂಜಾರಿ, ಕುರುಗೋಡು ಅಗ್ನಿಶಾಮಕ ಠಾಣೆಯ ಪಿ.ಯಲ್ಲಪ್ಪ ಮತ್ತು ಬಳ್ಳಾರಿ ಜಿಲ್ಲೆಯ ಗೃಹರಕ್ಷಕ ದಳದ ಹೆಚ್.ಲಕ್ಷ್ಮೀನಾರಾಯಣ, ಬಿ.ಸುದರ್ಶನ, ಡಿ.ಉಮೇಶ, ಕೆ.ನರಸಿಂಹರೆಡ್ಡಿ, ಪಿ.ಕೊಟ್ರಪ್ಪ, ಪೂಜಾರ್ ವಾಗೀಶ, ಇಬ್ರಾಹಿಂ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಈ ವೇಳೆ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗೃಹರಕ್ಷಕ ದಳದ ಡಿಜಿಪಿ ಅಮರಕುಮಾರ ಪಾಂಡೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.