ಬಳ್ಳಾರಿ: ನಗರದ ಕೇಂದ್ರ ಕಾರಾಗೃಹದಲ್ಲಿ ಪ್ರಿಸನ್ ಮಿಮಿಸ್ಟ್ರಿ ಆಫ್ ಇಂಡಿಯಾ ( ಪಿ.ಎಂ.ಐ) ಬಳ್ಳಾರಿ ಘಟಕದಿಂದ ಕ್ರಿಸ್ಮಸ್ ಹಾಗೂ ಹೊಸವರ್ಷದ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಮಯದಲ್ಲಿ ಹೆನ್ರಿ ಡಿಸೋಜ ಅವರು ಜೈಲಿನ ಸಹೋದರರನ್ನು ಉದ್ದೇಶಿಸಿ ಮಾತನಾಡಿ, ಉತ್ತಮ ವ್ಯಕ್ತಿಗಳಾಗಲು ಹಲವಾರು ಅವಕಾಶಗಳಿವೆ. ನೀವು ತಿಳಿದೋ, ತಿಳಿಯದೆಯೋ ಮಾಡಿದ ತಪ್ಪನ್ನು ತಿದ್ದಿಕೊಂಡು, ಉತ್ತಮ ವ್ಯಕ್ತಿಗಳಾಗಬೇಕೆಂದು ಕಿವಿಮಾತು ಹೇಳಿದ್ರು.
ಮನಸ್ಸಿನಲ್ಲಿ ಶಾಂತಿ, ಕಣ್ಣಲ್ಲಿ ಕರುಣೆ, ಮುಖದಲ್ಲಿ ಕಲೆ, ಬಾಯಲ್ಲಿ ಸತ್ಯ, ಹೃದಯದಲ್ಲಿ ಪ್ರೀತಿ ಹಾಗೂ ಕೈಕಾಲುಗಳಲ್ಲಿ ಸೇವೆ ಇದೆ. ಕ್ರಿಸ್ಮಸ್ ಜೈಲಿನಲ್ಲಿರುವ ಸಹೋದರ ಬಂಧುಗಳಿಗೆ ಮತ್ತು ಅವರ ಕುಟುಂಬಕ್ಕೆ ದೇವರು ಆಶೀರ್ವಾದ ನೀಡುತ್ತಾರೆ ಎಂದರು.
ವಿಜಯ ಮೇರಿ ಶಾಲಾ ವತಿಯಿಂದ ದಿವ್ಯಜ್ಯೋತಿ ಎಂಬ ನಾಟಕ ಮಾಡಿ ಅದರಲ್ಲಿ ತಂದೆಯೊಬ್ಬರು ಕಣ್ಣು ಇಲ್ಲದ ಮಗನಿಗೆ ತನ್ನ ಕಣ್ಣು ನೀಡಿ ಕುರುಡರಾಗುತ್ತಾರೆ. ಈ ತ್ಯಾಗ ಪ್ರೀತಿಯ ಸಂದೇಶ ನೀಡುವ ನಾಟಕ ಪ್ರದರ್ಶಿಸಿ ಪ್ರಭು ಯೇಸುವಿನ ಜನನದ ಪ್ರಕರಣದ ಕಾರ್ಯಕ್ರಮವನ್ನು ಕೈದಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಸೆಂಟ್ರಲ್ ಜೈಲ್ ಸಹಾಯಕ ಸೂಪರಿಂಡೆಂಟ್ ಪ್ರಸನ್ನ, ಫಾದರ್ ಐವನ್ ಪಿಂಟೋ, ಸಿಸ್ಟರ್ ಕ್ಯಾಥರಿನ್, ಆಗ್ನೆಸ್ ಅನಿತ, ಸ್ಟೆಲ್ಲಾ, ಮೇರಿ ರಾಜ್ ಮತ್ತು ಜೈಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.