ಬಳ್ಳಾರಿ:ಗ್ರಾಮ ಪಂಚಾಯತ್ ಅಧಿಕಾರಿಗಳು ವ್ಯವಸಾಯೇತರ ಜಮೀನಾಗಿ ಪರಿವರ್ತಿಸಿರುವ ಜಮೀನುಗಳನ್ನು ಅಭಿವೃದ್ಧಿ ಪಡಿಸದೆ, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ 9ಎ ಮತ್ತು 11ಬಿ ನಮೂನೆಗಳನ್ನು ವಿತರಿಸುತ್ತಿದ್ದಾರೆ ಎಂದು ಚಿರಬಿ ಕ್ಷೇತ್ರದ ಜಿಲ್ಲಾ ಪಂಚಾಯತ್ಸದಸ್ಯೆ ಉಮಾದೇವಿ ಆರೋಪಿಸಿದ್ದಾರೆ.
ಪಿಡಿಒಗಳಿಂದ ನಿಯಮ ಉಲ್ಲಂಘಿಸಿ 9ಎ,11ಬಿ ನಮೂನೆಗಳ ವಿತರಣೆಯ ಆರೋಪ - ಬಳ್ಳಾರಿ ಸುದ್ದಿ
ಹಿಂದಿನ ಸಭೆಯಲ್ಲೂ ಈ ವಿಷಯದ ಬಗ್ಗೆ ಗಮನ ಸೆಳೆದಿದ್ದರೂ ಯಾವುದೇ ಕ್ರಮಗಳಾಗಿಲ್ಲ. ಅಧಿಕಾರಿಗಳು ಮಾತು ಕೇಳದಿದ್ದಾಗ ನಾವು ಸಭೆಗೆ ಏಕೆ ಬರಬೇಕು..
ಜಿಲ್ಲೆಯ ಕೊಟ್ಟೂರು ತಾಲೂಕಿನ ಹ್ಯಾಳ್ಯಾ, ಕೆ.ಅಯ್ಯನಹಳ್ಳಿ, ರಾಂಪುರ ಗ್ರಾಮ ಪಂಚಾಯತ್‌ಗಳಲ್ಲಿ ವ್ಯವಸಾಯೇತರ ಜಮೀನಾಗಿ ಪರಿವರ್ತಿಸಿರುವ ಜಮೀನುಗಳಿಗೆ ಅಭಿವೃದ್ಧಿ ಪಡಿಸದೆ, 9ಎ ಮತ್ತು 11ಬಿ ನಮೂನೆಗಳನ್ನು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ವಿತರಿಸುತ್ತಿದ್ದಾರೆ. ಇದರಿಂದಾಗಿ ಬಡವರಿಗೆ ಅನ್ಯಾಯವಾಗಿದೆ. ಹಿಂದಿನ ಸಭೆಯಲ್ಲೂ ಈ ವಿಷಯದ ಬಗ್ಗೆ ಗಮನ ಸೆಳೆದಿದ್ದರೂ ಯಾವುದೇ ಕ್ರಮಗಳಾಗಿಲ್ಲ. ಅಧಿಕಾರಿಗಳು ಮಾತು ಕೇಳದಿದ್ದಾಗ ನಾವು ಸಭೆಗೆ ಏಕೆ ಬರಬೇಕು. ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಸಭೆಯಲ್ಲಿಯೇ ದಾಖಲೆಗಳನ್ನು ತೂರಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, 2017ನೇ ಸಾಲಿನ ಅಂಬೇಡ್ಕರ್ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ಹ್ಯಾಳ್ಯಾ ಗ್ರಾಮ ಪಂಚಾಯತ್‌ನಲ್ಲಿ ಆಗಿಲ್ಲ. ಹೀಗಾಗಿ ಸಾಕಷ್ಟು ಬಡ ಜನರಿಗೆ ಮನೆಯಿಲ್ಲದ ಹೊರಗಡೆ ಮಲಗುತ್ತಿದ್ದಾರೆ ಎಂದರು.