ಕರ್ನಾಟಕ

karnataka

ETV Bharat / city

ಹರಪನಹಳ್ಳಿಯಲ್ಲಿ ಕಾರು ಹರಿದು ಮಗು ಸ್ಥಳದಲ್ಲೇ ಸಾವು.. ಗರ್ಭಿಣಿ ತಾಯಿಗೆ ಗಾಯ - hosapete latest news

ಹರಪನಹಳ್ಳಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಗುವಿನ ಮೇಲೆ ಕಾರು ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿದರೆ, ಗರ್ಭಿಣಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

child died by accident at hosapete
ಹೊಸಪೇಟೆ ಆಕ್ಸಿಡೆಂಟ್​ ಕೇಸ್​

By

Published : Oct 16, 2021, 8:52 AM IST

ಹೊಸಪೇಟೆ(ವಿಜಯನಗರ):ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ ಪರಿಣಾಮ, ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಗುವಿನ ಮೇಲೆ ಕಾರು ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿದರೆ, ಗರ್ಭಿಣಿ ರೂಪ (ಸಾವನ್ನಪ್ಪಿದ ಮಗುವಿನ ತಾಯಿ) ಅವರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಹನುಮಂತ(04) ಮೃತಪಟ್ಟ ಮಗು. ಕುಂಚೂರು ಗ್ರಾಮದ ಕೋಟೆಪ್ಪ ಮತ್ತು ರೂಪ ದಂಪತಿಗೆ ಸೇರಿದ ಮಗುವಾಗಿದೆ.

ಸರ್ಕಾರಿ ಆಸ್ಪತ್ರೆಯ ನೌಕರ ರವಿ (22) ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿಕೊಂಡು ಬಂದಿದ್ದಾನೆಂದು ಆರೋಪಿಸಲಾಗಿದೆ. ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಜೀವಕ್ಕೆ ಕುತ್ತು ತಂದ ಕ್ರಿಕೆಟ್ ಬೆಟ್ಟಿಂಗ್.. ಸಾಲ ತೀರಿಸಲಾಗದೆ ಬಾಗಲಕೋಟೆಯಲ್ಲಿ ವ್ಯಕ್ತಿ ಆತ್ಮಹತ್ಯೆ

ABOUT THE AUTHOR

...view details