ಕರ್ನಾಟಕ

karnataka

ETV Bharat / city

ಹೊಸಪೇಟೆಯ ಡಾಣಾಪುರದಲ್ಲಿ ರಾಸಾಯನಿಕ ಔಷಧ ಸಿಂಪಡಿಸಿದ ಪೊಲೀಸರು - Lockdown to prevent corona virus spread

ಸೋಂಕು ಹರಡುತ್ತಿರುವವರ ಸಂಖ್ಯೆ ದಿನೆ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಒಬ್ಬರಿಂದ ಒಬ್ಬರು‌ ಅಂತರ ಕಾಪಾಡಿಕೊಳ್ಳಬೇಕು ಎಂದು ತಿಳಿವಳಿಕೆ ಮೂಡಿಸಿದರು.

Chemical spraying for corona control
ಕೊರೊನಾ ನಿಯಂತ್ರಣಕ್ಕೆ ರಾಸಾಯನಿಕ ಸಿಂಪಡಣೆ

By

Published : Apr 2, 2020, 4:29 PM IST

ಹೊಸಪೇಟೆ:ಕೋವಿಡ್-19 ನಿಯಂತ್ರಿಸಲು ತಾಲೂಕಿನ ಡಾಣಾಪುರ ಗ್ರಾಮದಲ್ಲಿ ಇಂದು ಪೊಲೀಸರು ರಾಸಾಯನಿಕ ಔಷಧವನ್ನು ಸಿಂಪಡಿಸಿದರು.

ಹಾಗೆಯೇ ಗ್ರಾಮಸ್ಥರಿಗೆ ಪೊಲೀಸರು, ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಕೊರೊನಾ ವೈರಸ್​​ ಕುರಿತು ಜಾಗೃತಿ ಮೂಡಿಸಿದರು.

ಹೊಸಪೇಟೆಯಲ್ಲಿ ಒಂದೇ ಕುಟುಂಬದ ಮೂವರಿಗೆ ವೈರಸ್‌ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಡಾಣಾಪುರ ಗ್ರಾಮ ಪಂಚಾಯಿತಿನಿಂದ ಔಷಧ ಸಿಂಪಡಣೆ ಮಾಡಲಾಗುತ್ತಿದೆ.

ಮನೆ ಬಿಟ್ಟು ಹೊರಗಡೆ ಬರಬೇಡಿ. ಕೆಮ್ಮುವಾಗ, ಸೀನುವಾಗ ನಿಮ್ಮ ಕರವಸ್ತ್ರದಿಂದ ಮೂಗನ್ನು ಮೂಚ್ಚಿಕೊಳ್ಳಿ. ಹಾಗೂ ನಿಮ್ಮ ಕೈಗಳನ್ನು ಸ್ಯಾನಿಟೈಸರ್ ಮತ್ತು ಸಾಬೂನಿಂದ ಕೈಗಳನ್ನು ತೊಳೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ABOUT THE AUTHOR

...view details