ಹೊಸಪೇಟೆ: ನಗರದ ಬಳ್ಳಾರಿ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ ರೇಸ್ ಸ್ಪರ್ಧೆಯಲ್ಲಿ ಕಾರ್ ಪಲ್ಟಿ ಹೊಡೆದ ಘಟನೆ ಜರುಗಿದ್ದು, ಸ್ಪರ್ಧಾಳು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರೇಸ್ ಕಾರ್ ಪಲ್ಟಿ; ಪ್ರಾಣಾಪಾಯದಿಂದ ಪಾರಾದ ಸ್ಪರ್ಧಾಳು - ಹೊಸಪೇಟೆ ಕಾರ್ ರೇಸ್
ಹೊಸಪೇಟೆ ನಗರದ ಬಳ್ಳಾರಿ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ ರೇಸ್ ಸ್ಪರ್ಧೆಯಲ್ಲಿ ವಾಹನವನ್ನು ಪಲ್ಟಿಯಾಗಿ ಸ್ಪರ್ದಾಳು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ರೇಸ್ ಕಾರು ಪಲ್ಟಿ
ಸ್ಪರ್ಧೆ ಪ್ರಾರಂಭವಾದ ಕ್ಷಣಾರ್ಧದಲ್ಲಿ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಮೋಟರ್ ಸ್ಪೋರ್ಟ್ಸ್ ಅಕಾಡೆಮಿ ಆಫ್ ವಿಜಯನಗರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಜೆ.ಎಸ್.ಡಬ್ಲ್ಯೂ ಸೇರಿದಂತೆ ನಾನಾ ಸಂಸ್ಥೆಗಳು ಜಂಟಿಯಾಗಿ ಮೋಟಾರ್ ಸ್ಪೋರ್ಟ್ಸ್ ಉತ್ಸವ ಆಯೋಜಿಸಿವೆ. ಸ್ಪರ್ಧೆಯಲ್ಲಿ ದೇಶದ ನಾನಾ ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.