ಬಳ್ಳಾರಿ/ಕಂಪ್ಲಿ: ನಿನ್ನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪುರಸಭೆಗೆ ಮತದಾನ ನಡೆದಿತ್ತು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ದಾನಪ್ಪ ಯಲ್ಲಪ್ಪ ತುಂಬಳ ಅವರ ಹೆಸರಿನಲ್ಲಿ ಮತದಾನ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಯಾರಾದೋ ಹೆಸರಿನಲ್ಲಿ ಮತ್ತಿನ್ಯಾರಿಂದಲೋ ಹಕ್ಕು ಚಲಾವಣೆ: ವಕೀಲರ ಆಕ್ರೋಶ - ಕಂಪ್ಲಿ ಪುರಸಭೆಗೆ ಮತದಾನ
ನಿನ್ನೆ ರಾಜ್ಯಾದ್ಯಾಂತ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಈ ವೇಳೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಮತಗಟ್ಟೆಯೊಂದರಲ್ಲಿ ಯಾರದೋ ಹೆಸರಲ್ಲಿ ಇನ್ಯಾರೋ ಮತ ಚಲಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
![ಯಾರಾದೋ ಹೆಸರಿನಲ್ಲಿ ಮತ್ತಿನ್ಯಾರಿಂದಲೋ ಹಕ್ಕು ಚಲಾವಣೆ: ವಕೀಲರ ಆಕ್ರೋಶ](https://etvbharatimages.akamaized.net/etvbharat/prod-images/768-512-5046800-thumbnail-3x2-lek.jpg)
ಚುನಾವಣೆಯ ಅಧಿಕಾರಿಗಳು ಹಾಗೂ ಪೊಲಿಂಗ್ ಏಜೆಂಟರು ಆ ವ್ಯಕ್ತಿಯ ಗುರುತನ್ನು ಹಿಡಿಯುವುದರಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯ ವಕೀಲರು ಆರೋಪ ಮಾಡಿದ್ದಾರೆ. ಪಟ್ಟಣದ 15 ಎ. ಮತಗಟ್ಟೆಗೆ ಆಗಮಿಸಿದ ಅನಾಮಿಕ ವ್ಯಕ್ತಿಯೋರ್ವ, ದಾನಪ್ಪ ಯಲ್ಲಪ್ಪ ಎಂಬ ವ್ಯಕ್ತಿಯ ಹೆಸರಿನಲ್ಲಿ ಮತದಾನ ಮಾಡಿ ಪರಾರಿಯಾಗಿದ್ದಾನೆ. ಈ ವ್ಯಕ್ತಿಯನ್ನು ಪಟ್ಟಣದ ಕಾಲೋನಿಯಲ್ಲಿ ಯಾರು ನೋಡಿಲ್ಲವಾದರು ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾನೆ. ಅಧಿಕಾರಿಗಳು ಹಾಗೂ ಪೊಲಿಂಗ್ ಏಜೆಂಟರು ಆ ವ್ಯಕ್ತಿಯ ಪರಿಚಯವನ್ನು ಮಾಡದೆ ಅವರಿಗೆ ಮತದಾನ ಮಾಡಲು ಅವಕಾಶ ನೀಡಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದೆ. ಅಧಿಕಾರಿಗಳು ಅವರಿಗೆ ಯಾವ ಆಧಾರದ ಮೇಲೆ ಮತದಾನಕ್ಕೆ ಅವಕಾಶವನ್ನು ನೀಡಿದ್ದಾರೆಂದು ಚುನಾವಣಾಧಿಕಾರಿಗಳನ್ನು ವಕೀಲರು ತರಾಟೆಗೆ ತೆಗದುಕೊಂಡರು.
ಚುನಾವಣೆಗೆ ನಿಂತಿರುವ ವ್ಯಕ್ತಿಗೆ ಪ್ರತಿ ಮತವೂ ಅಮೂಲ್ಯ, ಕೆಲಸ ಗೊತ್ತಿಲ್ಲದಿದ್ದರೆ ಮನೆಯಲ್ಲಿ ವಿಶ್ರಾಂತಿಯನ್ನು ಮಾಡಬೇಕು. ಅಧಿಕಾರಿಗಳಾಗಿ ರಾಜಕೀಯ ಮಾಡಬಾರದು ಎಂದು ಅಕ್ರೋಶ ವ್ಯಕ್ತ ಪಡಿಸಿದರು.