ಕರ್ನಾಟಕ

karnataka

ETV Bharat / city

ತಾವು ಸಿದ್ದಪಡಿಸಿದ ಉತ್ಪನ್ನವನ್ನು ಡಿಸಿಗೆ ಉಡುಗೊರೆ ನೀಡಿದ ಮಹಿಳೆಯರು - ಜಿಲ್ಲಾಧಿಕಾರಿ ನಕುಲ್​​

ಸಂಡೂರು ಸ್ವಯಂಶಕ್ತಿ ಯೋಜನೆ ಅಡಿಯಲ್ಲಿ (ಡಿಎಂಎಫ್) ಅಂದಾಜು 26 ಗ್ರಾಮ ಪಂಚಾಯಿತಿಗಳ ಸುಮಾರು 781 ಮಂದಿ ಮಹಿಳೆಯರಿಗೆ ಟೈಲರಿಂಗ್ ಕಸೂತಿ ಹಾಗೂ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯವನ್ನು ಆಯೋಜಿಸಲಾಗಿತ್ತು.

bellary-womens-gifted-dc-the-products-they-had-prepared
ಸಂಡೂರು ಸ್ವಯಂ ಶಕ್ತಿ ಯೋಜನೆ

By

Published : Dec 29, 2020, 8:01 PM IST

ಬಳ್ಳಾರಿ:ಸ್ವಯಂಶಕ್ತಿ ಯೋಜನೆ ಅಡಿ ಜಿಲ್ಲೆಯ ವಿವಿಧ ಗ್ರಾಮದ ನೂರಾರು ಮಹಿಳೆಯರು ಟೈಲರಿಂಗ್​ ಕಸೂತಿಯಲ್ಲಿ ತಾವು ಸಿದ್ಧಪಡಿಸಿದ ನಾನಾ ಬಗೆಯ ಅಲಂಕಾರಿಕ, ಗೃಹೋಪಯೋಗಿ ವಸ್ತುಗಳನ್ನು ಜಿಲ್ಲಾಧಿಕಾರಿ ನಕುಲ್​​ ಅವರಿಗೆ ನೀಡಿ ತಮ್ಮ ಕಾರ್ಯವನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ತಾವು ಸಿದ್ದಪಡಿಸಿದ ಉತ್ಪನ್ನಗಳನ್ನು ಡಿಸಿಗೆ ಉಡುಗೊರೆಯಾಗಿ ನೀಡಿದ ಮಹಿಳೆಯರು

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿಂದು ನಡೆದ ಸಭೆಯ ಬಳಿಕ ಜಿಲ್ಲೆಯ ಸಂಡೂರು ತಾಲೂಕಿನ ತಾಳೂರು, ಬನ್ನಿಹಟ್ಟಿ, ನರಸಿಂಗಪುರ, ಭುಜಂಗನಗರ, ನಿಡಗುರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಂದ ಬಂದ ನೂರಾರು ಜನ ಮಹಿಳೆಯರು ತಾವು ಸಿದ್ಧಪಡಿಸಿದ ಉತ್ಪನ್ನಗಳನ್ನು ಜಿಲ್ಲಾಧಿಕಾರಿಗೆ ನೀಡಿದರು.

ದಿ: ತಾಯಿ-ಮಗಳಲ್ಲಿ ರೂಪಾಂತರ ಕೊರೊನಾ ವೈರಸ್​ ಪತ್ತೆ : ವಸಂತಪುರ ಅಪಾರ್ಟ್​ಮೆಂಟ್ ಸೀಲ್​ಡೌನ್​

ABOUT THE AUTHOR

...view details