ಬಳ್ಳಾರಿ: ಕೇಂದ್ರ ಸರ್ಕಾರ ಫೆಬ್ರವರಿ ತಿಂಗಳಲ್ಲಿ ಮಂಡಿಸಲಿರುವ ಬಜೆಟ್ನಲ್ಲಿ ಜಿಲ್ಲೆಗೆ ಭರಪೂರ ನಿರೀಕ್ಷೆಗಳಿದ್ದು, ಕೇಂದ್ರ ಸರ್ಕಾರ ಈ ನಿರೀಕ್ಷೆಗಳಿನ್ನು ಈಡೇರಿಸುತ್ತಾ ಅಂತ ಕಾದು ನೋಡಬೇಕಿದೆ.
ಗಣಿಜಿಲ್ಲೆಯ ರೈಲ್ವೇ ಯೋಜನೆಗೆ ನಿರೀಕ್ಷೆಯ ಭರಪೂರ…! ದೇಶದಲ್ಲೇ ಹೆಚ್ಚಿನ ಆದಾಯ ಕೊಡುವ ಜಿಲ್ಲೆಗಳಲ್ಲಿ ಗಣಿಜಿಲ್ಲೆಯೂ ಒಂದು. ಇಲ್ಲಿನ ರೈಲ್ವೆ ಯೋಜನೆಗಳ ಅಭಿವೃದ್ಧಿ ಕುರಿತು ದಶಕದಿಂದಲೂ ಬಹಳಷ್ಟು ನಿರೀಕ್ಷೆಗಳಿವೆ. ಅಂದಾಜು 50 ಸಾವಿರ ಕೋಟಿ ರೂ.ಗಳಿಗೂ ಅಧಿಕ ಆದಾಯವು ಈ ಗಣಿ ಜಿಲ್ಲೆಯಿಂದ ಕೇಂದ್ರ ಸರ್ಕಾರಕ್ಕೆ ಹರಿದುಹೋಗುತ್ತದೆ. ಆದರೆ, ನಿರೀಕ್ಷಿತ ಯೋಜನೆಗಳು ಮಾತ್ರ ಈವರೆಗೂ ಈಡೇರಿಲ್ಲ.
ಈ ಸಂಬಂಧ ಜಿಲ್ಲೆಯ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಮುಖಂಡರನ್ನ ಕೇಳಿದಾಗ, ನಿರೀಕ್ಷೆಗಳು ಭರಪೂರ ಇವೆ. ಆದ್ರೆ ಈಡೇರಿಸಿದ್ದು ಮಾತ್ರ ಬೆರಳೆಣಿಕೆಯಷ್ಟು. ಪ್ರತಿಬಾರಿಯೂ ಕೂಡ ಕೇಂದ್ರ ಸರ್ಕಾರದ ಗಮನ ಸೆಳೆದರೂ ಕೂಡ ಬಹು ಮುಖ್ಯವಾದ ನಿರೀಕ್ಷೆಗಳು ಈವರೆಗೂ ಈಡೇರಿಲ್ಲ ಅಂತಾರೆ.
ಓದಿ-'ಹಕ್ಕಿ ಫೀವರ್' ನಾನ್ವೆಜ್ ಪ್ರಿಯರಲ್ಲಿ ಕಡಿಮೆ ಆಗಿಲ್ಲ ಫೀಯರ್... ವೈದ್ಯರು ಹೇಳುವುದಿಷ್ಟು!
ಹೊಸಪೇಟೆ ರೈಲ್ವೆ ನಿಲ್ದಾಣ ಅಭಿವೃದ್ಧಿ
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಅಧ್ಯಕ್ಷ ವೈ.ಯಮುನೇಶ ಅವರು, ಹಂಪಿ ವೀಕ್ಷಣೆಗೆಂದು ನಾನಾ ರಾಜ್ಯಗಳಿಂದ ಪ್ರವಾಸಿಗರು ಬರುತ್ತಾರೆ. ಅವರಿಗೆ ಅನುಕೂಲವಾಗುವಂತೆ ಅಂತರಾಷ್ಟ್ರೀಯ ರೈಲ್ವೆ ಮಾದರಿಯಲ್ಲಿ ಹೊಸಪೇಟೆ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸಬೇಕೆಂದು ಮೊದಲಿಂದಲೂ ಬೇಡಿಕೆ ಇದೆ. ಈ ಬಾರಿಯಾದ್ರೂ ಅದು ಈಡೇರಿಕೆ ಆಗಲಿದೆಯಾ ಅಂತ ಕಾಯ್ದು ನೋಡಬೇಕಿದೆ ಎಂದರು.
ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಕಾರ್ಯದರ್ಶಿ ಕೆ.ಮಹೇಶ ಅವರು ಮಾತನಾಡಿ, ಹೊಸಪೇಟೆ- ಬಳ್ಳಾರಿ- ರಾಮೇಶ್ವರಿ, ಬೀದರ್- ಹೊಸಪೇಟೆ- ಬಳ್ಳಾರಿ- ಗುಂತಕಲ್ಲು- ಬೆಳಗಾವಿ, ಹೊಸಪೇಟೆ - ಮಂಗಳೂರು (ವಯಾ: ಕೊಟ್ಟೂರು- ಹರಿಹರ ಮಾರ್ಗ) ರೈಲುಗಳ ಸಂಚಾರವನ್ನ ಪ್ರಾರಂಭಿಸಬೇಕೆಂದು ಮನವಿ ಮಾಡಿದರು.
ನಿರೀಕ್ಷಿತ ರೈಲ್ವೇ ಯೋಜನೆಗಳು
- ವಿಶ್ವ ವಿಖ್ಯಾತ ಹಂಪಿಯನ್ನ ವಿಶ್ವ ಪ್ರವಾಸೋದ್ಯಮ ಕೇಂದ್ರವನ್ನಾಗಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
- ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಿಗೆ 371 (ಜೆ) ವಿಶೇಷ ಪ್ರಾತಿನಿಧ್ಯ ನೀಡಿದ ಬೆನ್ನಲ್ಲೇ ವಿಶೇಷ ಅನುದಾನದ ಘೋಷಣೆ ಮಾಡಬೇಕು.
- ಬಳ್ಳಾರಿಯಿಂದ ಕಲಬುರಗಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು.
- ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳಿಗೆ ಅಗತ್ಯ ಅನುದಾನ ಮೀಸಲಿಡುವ ನಿರೀಕ್ಷೆ
- ಗಣಿ ಜಿಲ್ಲೆಯನ್ನ ಸಿದ್ಧ ಉಡುಪು ಘಟಕಗಳ ಹಬ್ ಆಗಿ ಘೋಷಿಸಬೇಕು
- ಗಣಿನಗರಿ ಬಳ್ಳಾರಿಯನ್ನ ಸ್ಮಾರ್ಟ್ ಸಿಟಿಯನ್ನಾಗಿ ಘೋಷಣೆ ಮಾಡುವ ನಿರೀಕ್ಷೆ