ಬಳ್ಳಾರಿ: ನಗರದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸೋಂಕಿತರ ಸಂಪರ್ಕಿತರನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಆಯಾ ವಾರ್ಡ್‍ಗಳಲ್ಲಿ ಪತ್ತೆಯಾಗುವ ಸೋಂಕಿತರ ಸಂಪರ್ಕಿತರ ಬಗ್ಗೆ ಮಾಹಿತಿ ನೀಡಿ, ಕೋವಿಡ್ ಸರಪಳಿಯನ್ನು ತುಂಡರಿಸಲು ನೆರವಾಗಿ ಎಂದು ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ನೂತನ ವಾರ್ಡ್ ಸದಸ್ಯರಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೊಸದಾಗಿ ಆಯ್ಕೆಯಾದ ಮಹಾನಗರ ಪಾಲಿಕೆ 39 ವಾರ್ಡ್‍ಗಳ ಸದಸ್ಯರೊಂದಿಗೆ ಗುರುವಾರ ನಡೆದ ಕೋವಿಡ್ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರೂ ಕೋವಿಡ್ ಲಸಿಕೆಯನ್ನು ಪಡೆಯಿರಿ. ಜನರಲ್ಲಿ ಲಸಿಕೆ ಕುರಿತು ಇರುವ ಭಯವನ್ನು ಹೋಗಲಾಡಿಸಿ. ಲಸಿಕೆ ಪಡೆದುಕೊಳ್ಳುವಂತೆ ಹೇಳಿ. ಕೋವಿಡ್ ಸಂಪರ್ಕಿತರನ್ನು ಗುರುತಿಸುವ ಮೂಲಕ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
39 ವಾರ್ಡ್‍ಗಳಲ್ಲಿ ಸದಸ್ಯರನ್ನು ಒಳಗೊಂಡಂತೆ ಒಂದು ತಂಡವನ್ನು ರಚಿಸಲಾಗುವುದು. ಕೋವಿಡ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಪ್ರಕರಣಗಳು ಮತ್ತು ಸಂಪರ್ಕಿತರ ಮಾಹಿತಿ ಕಲೆಹಾಕಬೇಕು ಎಂದರು. ಇದುವರೆಗೆ ಮಹಾನಗರ ಪಾಲಿಕೆಯಿಂದ ತೆಗೆದುಕೊಂಡ ಕ್ರಮಗಳ ಬಗ್ಗೆ ಸದಸ್ಯರಿಗೆ ವಿವರಿಸಿದರು.
ಲಸಿಕೆ ಪಡೆದವರಲ್ಲಿ ಮರಣ ಪ್ರಮಾಣ, ಕೋವಿಡ್ ಮರಳಿ ಬರುವುದು ಕಡಿಮೆ