ಬಳ್ಳಾರಿ:ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಾನಗರ ಪಾಲಿಕೆ ಮತ ಎಣಿಕೆ ಶುರುವಾಗಿದ್ದು, ಬೆಳಗ್ಗೆ 7.45 ನಿಮಿಷಕ್ಕೆ ಸ್ಟ್ರಾಂಗ್ ರೂಮ್ ತೆರೆಯಲಾಯಿತು.
ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಎಎಸ್ಪಿ ಬಿ.ಎನ್.ಲಾವಣ್ಯ, ಎಸಿ ರಮೇಶ ಕೋನರೆಡ್ಡಿ ಹಾಗೂ ಮಹಾನಗರ ಪಾಲಿಕೆ ಅಭ್ಯರ್ಥಿಗಳ ಸಮಕ್ಷಮದಲಿ ಸ್ಟ್ರಾಂಗ್ ರೂಮ್ ತೆರೆಯಲಾಯಿತು. ಮೂರ್ನಾಲ್ಕು ಕೊಠಡಿಗಳಲ್ಲಿ ಈ ಮತ ಯಂತ್ರೋಪಕರಣಗಳನ್ನ ಇಡಲಾಗಿದ್ದು, ಸ್ಟ್ರಾಂಗ್ ರೂಮ್ ಓಪನ್ ಆದ ಬಳಿಕ ಮತ ಎಣಿಕೆ ಕಾರ್ಯಾರಂಭ ನಡೆಯುತ್ತಿದೆ. ಸ್ಟ್ರಾಂಗ್ ರೂಮ್ ತೆರೆಯುವ ವೇಳೆ ಅಧಿಕಾರಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಗುಂಪುಗೂಡಿದ್ದರು.