ಬಳ್ಳಾರಿ:ಇಂದಿನಿಂದ ರಾಜ್ಯವ್ಯಾಪಿ ಕಠಿಣ ನಿಯಮಗಳೊಂದಿಗೆ ಲಾಕ್ಡೌನ್ ಜಾರಿಯಲ್ಲಿದ್ದು, ನಗರದ ಮಹಾನಗರ ಪಾಲಿಕೆ ಮಾತ್ರ ಯಾವುದೇ ತಯಾರಿ ಮಾಡಿಕೊಂಡಿಲ್ಲ.
ನಗರದಲ್ಲಿ ಕನಿಷ್ಠ ಬ್ಯಾರಿಕೇಡ್ ಅಳವಡಿಕೆಗೂ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಮುಂದಾಗಿಲ್ಲ ಎನ್ನಲಾಗಿದೆ. ಮಹಾನಗರ ಪಾಲಿಕೆ ಆಯುಕ್ತರು ಕೇವಲ ದಂಡ ವಸೂಲಾತಿಗೆ ಮಾತ್ರ ಸೀಮಿತವಾಗಿದ್ದಾರೆ. ಇಂತಹ ನಿರ್ಲಕ್ಷ್ಯದಿಂದಾಗಿಯೇ ನಿನ್ನೆ ಅಂದಾಜು 2141 ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಲಾಕ್ಡೌನ್ಗೆ ಪೂರ್ವ ತಯಾರಿ ಮಾಡಿಕೊಳ್ಳದ ಮಹಾನಗರ ಪಾಲಿಕೆ ಅನಗತ್ಯ ಓಡಾಡುವ ವಾಹನ ಸವಾರರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು :
ಇನ್ನು ಹೊಸಪೇಟೆಯಲ್ಲಿ ಅನಗತ್ಯವಾಗಿ ಓಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಬೆಳಗ್ಗೆ 6 ಗಂಟೆಯಿಂದಲೇ ಪೊಲೀಸರು ನಗರದಲ್ಲಿ ಸಂಚರಿಸಿ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ರೋಟರಿ ವೃತ್ತ, ಎಪಿಎಂಸಿ ವೃತ್ತ, ವಾಲ್ಮೀಕಿ ವೃತ್ತ ಸೇರಿದಂತೆ ನಾನಾ ಕಡೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಕಾರು, ಬೈಕ್ಗಳು ಸೇರಿದಂತೆ 30ಕ್ಕೂ ವಾಹನಗಳು ಸೀಜ್ ಮಾಡಲಾಗಿದೆ.
ಓದಿ : ಶಾಕಿಂಗ್ ಸುದ್ದಿ.. ಇತರೆ ಕಾಯಿಲೆಗಳಿಲ್ಲದಿದ್ದರೂ ಸಹ ಕೊರೊನಾ ಸೋಂಕಿಗೆ ಬಲಿಯಾದವರೇ ಹೆಚ್ಚು!