ಬಳ್ಳಾರಿ: ಇಡೀ ಭಾರತವೇ ಲಾಕ್ಡೌನ್ ಆಗಿ ಇಂದಿಗೆ ಎರಡು ದಿನವಾಯ್ತು ಆದ್ರೆ ರಸ್ತೆಯಲ್ಲಿ ಪುಂಡರ ತಿರುಗಾಟ ಮಾತ್ರ ಇನ್ನು ನಿಂತಿಲ್ಲ. ಈ ನಿಟ್ಟಿನಲ್ಲಿ ಗಣಿನಾಡಿನ ಟೀಂ ದುರ್ಗಾ ರಸ್ತೆಗಿಳಿದವರಿಗೆ ಲಾಟಿ ರುಚಿ ತೋರಿಸುವುದರ ಜೊತೆ ಮಾಸ್ಕ್ ಹಾಕಿಕೊಳ್ಳುವಂತೆ ತಿಳಿಹೇಳಿತು.
ತಿರುಗಾಡುವ ಪುಂಡರಿಗೆ ಲಾಠಿ ಏಟಿನ ರುಚಿ ತೋರಿದ ಟೀಂ ದುರ್ಗಾ - ಭಾರತ ಲಾಕ್ಡೌನ್
ಗಣಿನಾಡಿನಲ್ಲಿ ಟೀಮ್ ದುರ್ಗಾ ರಸ್ತೆಗೆ ಇಳಿದು ಕಾರ್ಯಾಚರಣೆ ನಡೆಸಿದ್ದು, ಅನಾವಶ್ಯಕವಾಗಿ ಓಡಾಡುವವರಿಗೆ ಲಾಟಿ ರುಚಿ ಜೊತೆಗೆ ಸಾರ್ವಜನಿಕರಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದೆ.
ಟೀಂ ದುರ್ಗಾ
ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿ ಸಾರ್ವಜನಿಕರ ತಿರುಗಾಟ ಮುಂದುವರೆದಿದ್ದು, ಅನಾವಶ್ಯಕವಾಗಿ ಓಡಾಡುವರಿಗೆ ಲಾಟಿ ಏಟು ನೀಡಿದ ಪೊಲೀಸರು ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿ ಮತ್ತೆ ಕಾಣಿಸಿದಂತೆ ಎಚ್ಚರಿಕೆ ನೀಡಿದರು. ಇನ್ನು ನಗರದಲ್ಲಿ ಸಂಚಾರ ನಡೆಸಲು ವೈದ್ಯಕೀಯ ಇಲಾಖೆ, ಮಹಾನಗರ ಪಾಲಿಕೆ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ಮಾಧ್ಯಮದವರಿಗೆ ಮಾತ್ರ ವಿನಾಯಿತಿ ನೀಡಿದ್ದಾರೆ.