ಬಳ್ಳಾರಿ: ಸಾರ್ವಜನಿಕರ ಸ್ಥಳದಲ್ಲಿ ಬೈಕ್ನಲ್ಲಿ ಅನಾವಶ್ಯಕವಾಗಿ ರಾತ್ರಿ 7 ರಿಂದ 9 ಗಂಟೆಯವರೆಗೆ ಓಡಾಡುವ, ಹರಟೆ ಹೊಡೆಯುವ ಯುವಕರಿಗೆ ಕೌಲ್ ಬಜಾರ್ ಠಾಣೆಯ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಅನಾವಶ್ಯಕ ತಿರುಗಾಟ ಕಂಡರೆ ಬೀಳುತ್ತೆ ಲಾಠಿ ಏಟು; ಮನೆಯೊಳಗಿದ್ದರೆ ನೀವು ಸೇಫು - ಲಾಕ್ ಡೌನ್ ಆದೇಶ ಪಾಲಿಸದ ಜನರಿಗೆ ಲಾಠಿ ರುಚಿ
ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿ ಕೆಲವರು ಲಾಕ್ ಡೌನ್ ಆದೇಶ ಪಾಲಿಸದ ಹಿನ್ನೆಲೆ ಕೌಲ ಬಜಾರ್ ಠಾಣೆಯ ಸಿಪಿಐ ಸುಭಾಷ್ ಚಂದ್ರ ನೇತೃತ್ವದಲ್ಲಿ ಎರಡು ಆಟೋ ಬಾಡಿಗೆ ತೆಗೆದುಕೊಂಡು, ಕೆಲ ಪ್ರದೇಶಗಳಿಗೆ ಎಂಟ್ರಿ ಕೊಟ್ಟು ಅನಾವಶ್ಯಕವಾಗಿ ಓಡಾಡುತ್ತಿರುವವರಿಗೆ ಲಾಠಿ ರುಚಿ ತೋರಿಸಿದ್ದಾರೆ.
ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿ ಕೆಲವರು ಲಾಕ್ ಡೌನ್ ಆದೇಶ ಪಾಲಿಸದ ಹಿನ್ನೆಲೆ ಕೌಲ ಬಜಾರ್ ಠಾಣೆಯ ಸಿಪಿಐ ಸುಭಾಷ್ ಚಂದ್ರ ನೇತೃತ್ವದಲ್ಲಿ ಎರಡು ಆಟೋ ಬಾಡಿಗೆ ತೆಗೆದುಕೊಂಡು, ಕೆಲ ಪ್ರದೇಶಗಳಿಗೆ ಎಂಟ್ರಿ ಕೊಟ್ಟು ಅನಾವಶ್ಯಕವಾಗಿ ಓಡಾಡುತ್ತಿರುವವರಿಗೆ ಲಾಠಿ ರುಚಿ ತೋರಿಸಿದ್ದಾರೆ. ಕೌಲ್ ಬಜಾರ್, ರೇಡಿಯೋ ಪಾರ್ಕ್, ಸುಧಾಕ್ರಾಸ್ ರಸ್ತೆಗಳ ಅಂಗಡಿಗಳು ಮುಂದೆ ಕೆಲ ಯುವಕರು ಕುಳಿತು ಕಾಲ ಕಳೆಯುತ್ತಿದ್ದು, ಅವರಿಗೂ ಸಹ ಕೊರೊನಾ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ಕುರಿತಂತೆ ಸಿಪಿಐ ಸುಭಾಷ್ ಚಂದ್ರ ಮಾತನಾಡಿ, ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಾಸ್ಕ್ ಹಾಕಿಕೊಳ್ಳಬೇಕು ಜೊತೆಗೆ ಅನಾವಶ್ಯಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಂತಿಲ್ಲ ಎಂದು ಸೂಚಿಸಿದರು.