ಬಳ್ಳಾರಿ: ನಗರದ ರೇಡಿಯೋ ಪಾರ್ಕ್ ಗಣೇಶ ದೇವಸ್ಥಾನದ ಗೌರಿ ಪೂಜೆ ಸಂಭ್ರಮದಿಂದ ನಡೆದಿದ್ದು ಮಹಿಳೆಯರು ಗೌರಿಗೆ ದೀಪ ಬೆಳಗುವ ಭಕ್ತಿಭಾವ ಮೆರೆದರು.
ಗೌರಿ ಪೂಜೆ: ದೀಪ ಬೆಳಗಿ ಮಹಿಳೆಯರಿಂದ ಭಕ್ತಿಭಾವ, ಸಿಹಿ ಹಂಚಿ ಸಂಭ್ರಮ - ಪಟಾಕಿ ಹಚ್ಚಿ ಸಂಭ್ರಮ ಗೌರಿ ಪೂಜೆ
ನಗರದ ರೇಡಿಯೋ ಪಾರ್ಕ್ ಗಣೇಶ ದೇವಸ್ಥಾನದಲ್ಲಿ ಗೌರಿ ಪೂಜೆ ಸಂಭ್ರಮದಿಂದ ನೆರವೇರಿದೆ.
ಸಡಗರ,ಸಂಭ್ರಮದಿಂದ ಗೌರಿಗೆ ದೀಪಾರತಿ: ಸೀರೆಯುಟ್ಟು ಕಂಗೊಳಿಸಿದ ನಾರಿಯರು
ಸಂಜೆ 7 ಗಂಟೆಯಿಂದಲೇ ಗೌರಿ ಪೂಜೆ ಕಾರ್ಯಕ್ರಮ ಪ್ರಾರಂಭವಾಗಿದ್ದು, ಹೆಣ್ಣು ಮಕ್ಕಳು, ಯುವತಿಯರು, ಮಹಿಳೆಯರು ಸೀರೆಯುಟ್ಟು ಕಂಗೊಳಿಸಿದ್ರು. ಕೈಯಲ್ಲಿ ಸಕ್ಕರೆ, ಆರತಿ ದೀಪದ ತಟ್ಟೆ ಹಿಡಿದುಕೊಂಡು ಗೌರಿಗೆ ದೀಪ ಬೆಳಗಿದ್ದಾರೆ. ಮನೆಯಿಂದ ಸಿಹಿ ಪದಾರ್ಥಗಳ ಎಡೆ ಮಾಡಿಕೊಂಡು ಗೌರಿಗೆ ಅರ್ಪಿಸಿ ನಂತರ ಪಟಾಕಿ ಹಚ್ಚಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.