ಕರ್ನಾಟಕ

karnataka

ETV Bharat / city

ಎಸ್ಪಿ ಕಚೇರಿಗೆ ಹಂಪಿ ಡಿವೈಎಸ್ಪಿ ಕಾಶಿಗೌಡ.. ರಾಜೀನಾಮೆ ಪ್ರಹಸನ ಕುತೂಹಲ

ಕೈಯಲ್ಲಿ ಒಂದು ಕವರ್ ಹಿಡಿದುಕೊಂಡ ಡಿವೈಎಸ್ಪಿ, ಎಸ್ಪಿ ಕಚೇರಿಯತ್ತ ಓಡೋಡಿ ಹೋಗುವಾಗ ಮಾಧ್ಯಮದವರು ಕ್ಯಾಮೆರಾ ಕಣ್ಣಿನಲ್ಲಿ ಅವರನ್ನ ಸೆರೆ ಹಿಡಿಯಲು ಹೋಗಿದ್ದಾರೆ. 'ಬ್ಯಾಡ ರೀ ಎನ್ನುತ್ತಲೇ' ಕಚೇರಿಯ ಒಳಗೆ ಓಡೋಡಿ ಬಂದಿದ್ದಾರೆ..

bellary-dist-sp-office-visit-hampi-dispi-news
ಎಸ್ಪಿ ಕಚೇರಿಗೆ ಆಗಮಿಸಿದ ಹಂಪಿ ಡಿವೈಎಸ್ಪಿ ಕಾಶಿಗೌಡ, ಚರ್ಚೆ ಬಳಿಕ ಮುಂದಿನ ನಿರ್ಧಾರ...

By

Published : Oct 24, 2020, 8:00 PM IST

ಬಳ್ಳಾರಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಇಂದು ಸಂಜೆ ವೇಳೆಗೆ ಹಂಪಿ ಉಪ ವಿಭಾಗದ ಡಿವೈಎಸ್ಪಿ ಎಸ್.ಎಸ್.ಕಾಶಿಗೌಡ ಅವರು ಆಗಮಿಸಿದರು.

ಎಸ್ಪಿ ಕಚೇರಿಗೆ ಆಗಮಿಸಿದ ಹಂಪಿ ಡಿವೈಎಸ್ಪಿ ಕಾಶಿಗೌಡ..

ಹೊಸಪೇಟೆ ತಾಲೂಕಿನ ಹಂಪಿ ಉಪ ವಿಭಾಗದ ಡಿವೈಎಸ್ಪಿ ಕಚೇರಿಯ ವಾಹನದಲ್ಲಿ ಆಗಮಿಸಿದ ಎಸ್​​ಎಸ್ ಕಾಶಿಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ರನ್ನ ಭೇಟಿಯಾಗಲು ಕಚೇರಿಯತ್ತ ಓಡೋಡಿ ಬಂದರು. ಕೈಯಲ್ಲಿ ಒಂದು ಕವರ್ ಹಿಡಿದುಕೊಂಡ ಡಿವೈಎಸ್ಪಿ, ಎಸ್ಪಿ ಕಚೇರಿಯತ್ತ ಓಡೋಡಿ ಹೋಗುವಾಗ ಮಾಧ್ಯಮದವರು ಕ್ಯಾಮೆರಾ ಕಣ್ಣಿನಲ್ಲಿ ಅವರನ್ನ ಸೆರೆ ಹಿಡಿಯಲು ಹೋಗಿದ್ದಾರೆ. 'ಬ್ಯಾಡ ರೀ ಎನ್ನುತ್ತಲೇ' ಕಚೇರಿಯ ಒಳಗೆ ಓಡೋಡಿ ಬಂದಿದ್ದಾರೆ.

ಬಳ್ಳಾರಿ ವಲಯ ಐಜಿಪಿ ನಂಜುಂಡ ಸ್ವಾಮಿ ಅವರ ಕಿರುಕುಳಕ್ಕೆ ಬೇಸತ್ತು, ರಾಜೀನಾಮೆ ಸಲ್ಲಿಸಿದ ಡಿವೈಎಸ್ಪಿ ಕಾಶಿಗೌಡ ಇಂದು ಎಸ್ಪಿ ಸೈದುಲು ಅಡಾವತ್ ಅವರ ಜತೆ ಚರ್ಚೆಯಲ್ಲಿ ತೊಡಗಿದ್ದಾರೆ. ಭೇಟಿ ಬಳಿಕ ಡಿವೈಎಸ್ಪಿ ಮುಂದಿನ ನಿರ್ಧಾರ ಮಾಡುವ ಸಾಧ್ಯತೆ ಇದೆ.

ಇದನ್ನು ಓದಿ:ಹಂಪಿ ಡಿವೈಎಸ್​​ಪಿ ರಾಜೀನಾಮೆ ವಿಚಾರ: ಶಿಷ್ಟಾಚಾರ ಪಾಲನೆಯಾಗಿಲ್ಲ ಎಂದ ಎಸ್​​ಪಿ

For All Latest Updates

ABOUT THE AUTHOR

...view details