ಕರ್ನಾಟಕ

karnataka

ETV Bharat / city

ಮಾರ್ಚ್​​ನಿಂದ ಹಂಪಿಯಲ್ಲಿ ಬ್ಯಾಟರಿ ಚಾಲಿತ ರೈಲು ಸಂಚಾರ: ಜಿಲ್ಲಾಧಿಕಾರಿ - ಹಂಪಿಯನ್ನು ವೀಕ್ಷಣೆ ಮಾಡಲು ನಿರ್ದಿಷ್ಟ ದರವನ್ನು ನಿಗದಿ

ವಿಶ್ವ ಪಾರಂಪರಿಕ ತಾಣವಾದ ಹಂಪಿಯಲ್ಲಿ ಇನ್ಮುಂದೆ ಬ್ಯಾಟರಿ ಚಾಲಿತ ರೈಲು ಸಂಚಾರ ಶುರುವಾಗಲಿದ್ದು, ಮುಂದಿನ ಮಾರ್ಚ್ ತಿಂಗಳೊಳಗೆ ಈ ರೈಲು ಸಂಚಾರಕ್ಕೆ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

KN_BLY_3_DC_NAKUL_BYTE_VSL_7203310
ಮಾರ್ಚ್ ತಿಂಗಳಿನಿಂದ ಹಂಪಿಯಲ್ಲಿ ಬ್ಯಾಟರಿ ಚಾಲಿತ ರೈಲು ಸಂಚಾರ ಶುರು, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್

By

Published : Jan 2, 2020, 5:18 PM IST

ಬಳ್ಳಾರಿ:ವಿಶ್ವ ಪಾರಂಪರಿಕ ತಾಣವಾದ ಹಂಪಿಯಲ್ಲಿ ಇನ್ಮುಂದೆ ಬ್ಯಾಟರಿ ಚಾಲಿತ ರೈಲು ಸಂಚಾರ ಶುರುವಾಗಲಿದ್ದು, ಮುಂದಿನ ಮಾರ್ಚ್ ತಿಂಗಳೊಳಗೆ ಈ ಸೇವೆ ಸಿಗಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಮಾರ್ಚ್ ತಿಂಗಳಿನಿಂದ ಹಂಪಿಯಲ್ಲಿ ಬ್ಯಾಟರಿ ಚಾಲಿತ ರೈಲು ಸಂಚಾರ ಶುರು: ಜಿಲ್ಲಾಧಿಕಾರಿ ಎಸ್.ಎಸ್.ನಕುಲ್

ಎರಡು‌ ಬ್ಯಾಟರಿ ಚಾಲಿತ ವಾಹನಗಳು ಸೇರಿದಂತೆ ಒಂದು ಬ್ಯಾಟರಿ‌ ಚಾಲಿತ ರೈಲು ಗಾಡಿಯನ್ನು ಓಡಿಸಲು‌ ಚಿಂತನೆ ನಡೆಸಲಾಗಿದೆ. ಹಂಪಿ ತುಂಬಾ ದೊಡ್ಡ ಪ್ರದೇಶವಾಗಿರುವುದರಿಂದ ಇದು ಅವಶ್ಯಕವಾಗಿದೆ ಎಂದರು.

ಇಡೀ ದಿನ ಹಂಪಿಯನ್ನು ವೀಕ್ಷಣೆ ಮಾಡಲು ನಿರ್ದಿಷ್ಟ ದರವನ್ನು ನಿಗದಿ ಮಾಡಲಾಗುವುದು. ಪ್ರವಾಸಿಗರು ಎಲ್ಲಿ ಬೇಕಾದರೂ ಹತ್ತಿ ಇಳಿಯಬಹುದು. ಅಂದಾಜು 21ಕ್ಕೂ ಅಧಿಕ ಸಾಮರ್ಥ್ಯದ ಸೀಟ್​​​​​ಗಳನ್ನು ಹೊಂದಿದ್ದು, ಇವು ಸುಸಜ್ಜಿತ ವಾಹನಗಳಾಗಿವೆ ಎಂದು ತಿಳಿಸಿದರು.

ABOUT THE AUTHOR

...view details