ಕರ್ನಾಟಕ

karnataka

ETV Bharat / city

ಬಳ್ಳಾರಿಯಲ್ಲಿ ನವಜಾತ ಶಿಶುವಿನ ತಾಯಿ, 8 ತಿಂಗಳ ಗರ್ಭಿಣಿಗೂ ವಕ್ಕರಿಸಿದ ಮಹಾಮಾರಿ ಕೊರೊನಾ - ಬಳ್ಳಾರಿ ಕೊರೊನಾ ಸೋಂಕು ಪ್ರಕರಣಗಳು

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇಂದು ಬಳ್ಳಾರಿಯಲ್ಲಿ ನವಜಾತ ಶಿಶುವಿನ ತಾಯಿ ಮತ್ತು 8 ತಿಂಗಳ ಗರ್ಭಿಣಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಎಸ್.ಎಸ್.ನಕುಲ್
ಎಸ್.ಎಸ್.ನಕುಲ್

By

Published : May 21, 2020, 1:41 PM IST

ಬಳ್ಳಾರಿ: ನವಜಾತ ಶಿಶುವಿನ ತಾಯಿ ಹಾಗೂ 8 ತಿಂಗಳ ಗರ್ಭಿಣಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ದೃಢಪಡಿಸಿದ್ದಾರೆ.

ಮುಂಬೈ ಮೀನು ಮಾರುಕಟ್ಟೆಯಲ್ಲಿ ಮೀನು ಹಿಡಿಯುವ ಅಂದಾಜು 63 ಮಂದಿ ಕಾರ್ಮಿಕರು ಮೇ 6 ರಂದು ನೆರೆಯ ಆಂಧ್ರಪ್ರದೇಶದ ಗುಂತ್​ಕಲ್ಲಿನಿಂದ ಬಳ್ಳಾರಿಗೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಬಂದಿದ್ದರು. ಇವರಲ್ಲಿ ಬಳ್ಳಾರಿ ನಗರ, ಗ್ರಾಮಾಂತರ ಪ್ರದೇಶ ವ್ಯಾಪ್ತಿಯ 11 ಮಂದಿ ವಲಸೆ ಕಾರ್ಮಿಕರ ಪೈಕಿ ಏಳು ಮಂದಿ ಮಹಿಳೆಯರು, ಒಬ್ಬ ಮಂಗಳಮುಖಿ ಹಾಗೂ‌ ಮೂವರು ಪುರುಷರು ಇದ್ದಾರೆ. ಇವರಲ್ಲಿ ನವ ಜಾತ ಶಿಶುವಿಗೆ ಜನ್ಮ ನೀಡಿದ ತಾಯಿ ಸೇರಿದಂತೆ ಎಂಟು ತಿಂಗಳ ಗರ್ಭಿಣಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದರು.

ಮೇ 6 ರಂದು ಮುಂಬೈನಿಂದ ನೇರವಾಗಿ ನೆರೆಯ ಆಂಧ್ರಪ್ರದೇಶದ ಗುಂತಕಲ್​ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದರು. ಕರ್ನೂಲ್ ಜಿಲ್ಲೆಯ ಡಿಸಿ ಯವರಿಂದ ನಮಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಗುಂತಕಲ್​ ರೈಲು ನಿಲ್ದಾಣಕ್ಕೆ ಕೆಎಸ್​ಆರ್​ಟಿಸಿ ಬಸ್ ಅನ್ನು ಕಳಿಸಿಕೊಡಲಾಗಿತ್ತು. ಅಲ್ಲಿಂದ ಅವರನ್ನ ನೇರವಾಗಿ ಬಳ್ಳಾರಿಗೆ ಕರೆ ತಂದು ಮಯೂರ ಕೋಟೆಲ್ ಹಿಂಭಾಗದ ಬಿಸಿಎಂ ಹಾಸ್ಟೆಲ್​ನ ವಸತಿ ನಿಲಯದಲ್ಲಿ ಕ್ವಾರಂಟೈನ್ ‌ಮಾಡಲಾಗಿತ್ತು.‌ 12 ದಿನಗಳ ಬಳಿಕ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details