ಕರ್ನಾಟಕ

karnataka

ETV Bharat / city

ಕೊರೊನಾ ಕಂಟಕ, ಒಂದೇ ಕುಟುಂಬದ ಮೂವರು ದಿಕ್ಕಾಪಾಲು.. ಕಣ್ಣು ಕಾಣದ ತಂದೆ ಆರೈಕೆ ಚಿಂತೆಯಲ್ಲೇ ಪುತ್ರಿ - ಬಳ್ಳಾರಿ ಜಿಲ್ಲಾ ಸುದ್ದಿ

ಕುರುಡರಾಗಿರುವ 80 ವರ್ಷದ ವಯೋವೃದ್ಧರಿಗೆ ಆರೈಕೆ ಮಾಡುವವರಿಲ್ಲದೆ ನಿತ್ಯ ಪರದಾಡುವಂತಾಗಿದೆ. ಸದ್ಯ ಅವರ ಮಗಳು ತಮ್ಮ ತಾಯಿಯನ್ನು ತಂದೆಯವರ ಜೊತೆ ಸೇರಿಸುವಂತೆ ಸರ್ಕಾಕ್ಕೆ ಮನವಿ ಮಾಡಿದ್ದಾರೆ..

bellary-corona-infected-family-members-problem
ಕೊರೊನಾ ಸೋಂಕಿತರ ಪರದಾಟ

By

Published : Jul 31, 2020, 7:32 PM IST

ಬಳ್ಳಾರಿ :ಕೊರೊನಾ ಸೋಂಕಿಗೆ ಗುರಿಯಾದ ಕುಟುಂಬಕ್ಕೆ ವಿವಿಧ ಕಡೆ ಕ್ವಾರಂಟೈನ್​​ ಮಾಡಲಾಗಿದ್ದು, ಆಸರೆ ಇಲ್ಲದೆ ವೃದ್ಧರ ಪರಿಸ್ಥಿತಿ ಅಯೋಮಯವಾಗಿದೆ.

ಬಳ್ಳಾರಿ ಜಿಲ್ಲೆ ಮೂಲದ ಬೆಂಗಳೂರಿನ ಅರೆಹಳ್ಳಿಯಲ್ಲಿ ವಾಸವಾಗಿರುವ 80 ವರ್ಷ ವೃದ್ಧ ಹಾಗೂ ಅವರ ಪತ್ನಿ ಮತ್ತು ಮಗನಿಗೆ ಕೊರೊನಾ ಸೋಂಕು ತಗುಲಿದೆ. ಆ ಮೂವರನ್ನು ವಿವಿಧ ಕೋವಿಡ್​ ಕೇರ್​ ಸೇಂಟರ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಣ್ಣು ಕಾಣದ ತಂದೆ ಆರೈಕೆ ಚಿಂತೆಯಲ್ಲೇ ಪುತ್ರಿ..

ಕುರುಡರಾಗಿರುವ 80 ವರ್ಷದ ವಯೋವೃದ್ಧರಿಗೆ ಆರೈಕೆ ಮಾಡುವವರಿಲ್ಲದೆ ನಿತ್ಯ ಪರದಾಡುವಂತಾಗಿದೆ. ಸದ್ಯ ಅವರ ಮಗಳು ತಮ್ಮ ತಾಯಿಯನ್ನು ತಂದೆಯವರ ಜೊತೆ ಸೇರಿಸುವಂತೆ ಸರ್ಕಾಕ್ಕೆ ಮನವಿ ಮಾಡಿದ್ದಾರೆ.

ತಂದೆಯನ್ನು ದೊರೆಸ್ವಾಮಿ ಆಸ್ಪತ್ರೆಯಲ್ಲಿ ವಯೋವೃದ್ಧೆ ತಾಯಿಯನ್ನು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ‌ ಆಸ್ಪತ್ರೆಯಲ್ಲಿ ಹಾಗೂ ಸಹೋದರನನ್ನು ಬೇರೊಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ನಮ್ಮ ತಂದೆಯವರ ಆರೈಕೆ ಮಾಡಲು ಯಾರೂ ಇಲ್ಲದಂತಾಗಿದೆ. ದಯವಿಟ್ಟು ನಮ್ಮ ತಾಯಿಯನ್ನು ತಂದೆಯವರ ಜೊತೆ ಇರಿಸಿ ಎಂದು ಅಧಿಕಾರಿಗಳಿಗೆ ಬಳ್ಳಾರಿಯಲ್ಲಿರುವ ಮಗಳು ಮನವಿ ಮಾಡಿದ್ದಾರೆ.

ABOUT THE AUTHOR

...view details