ಬಳ್ಳಾರಿ:ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತಿದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಂಗಳವಾರ ಒಂದೇ ದಿನ 1280 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 27 ಜನ ಮೃತಪಟ್ಟಿದ್ದಾರೆ.
ಬಳ್ಳಾರಿಯಲ್ಲಿ 1280 ಕೋವಿಡ್ ಸೋಂಕಿತರು ಪತ್ತೆ: ಒಂದೇ ದಿನ 27 ಜನ ಸಾವು - ಬಳ್ಳಾರಿ ಕೊರೊನಾ ಸಾವು
ಗಣಿ ಜಿಲ್ಲೆಯಲ್ಲಿ ಒಂದೇ ದಿನ 1280 ಸೋಂಕಿತರು ಪತ್ತೆಯಾಗಿದ್ದು, 27 ಜನ ಸಾವನ್ನಪ್ಪಿದ್ದಾರೆ.
bellari
ಕೊರೊನಾದಿಂದ ಒಂದೇ ದಿನ 27 ಜನ ಮೃತಪಟ್ಟಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಇನ್ನು ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 56,201ಕ್ಕೆ ಏರಿಕೆ ಆಗಿದ್ದರೆ, ಮೃತರ ಸಂಖ್ಯೆ 793ಕ್ಕೆ ಏರಿಕೆದೆ.
ಇಂದು 557 ಜನ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 43,946 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 11,462 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಬಳ್ಳಾರಿ- 647, ಸಂಡೂರು- 181, ಸಿರುಗುಪ್ಪ- 79 , ಹೊಸಪೇಟೆ- 132, ಎಚ್.ಬಿ.ಹಳ್ಳಿ- 53, ಕೂಡ್ಲಿಗಿ-70, ಹರಪನಹಳ್ಳಿ- 63, ಹಡಗಲಿ- 55 ಪ್ರಕರಣಗಳಿವೆ.