ಹೊಸಪೇಟೆ (ವಿಜಯನಗರ) :ಹಾನಗಲ್ ಉಪಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ಸಿಎಂ ಉದಾಸಿಯವರ ಅಭಿವೃದ್ದಿ ಕಾರ್ಯ ಬಿಜೆಪಿ ಗೆಲ್ಲಲು ಸಹಕಾರಿಯಾಗಲಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಹಾನಗಲ್ ಉಪಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣ ಅಂತಾ ಹೇಳಿರುವ ಸಚಿವ ಬಿ ಸಿ ಪಾಟೀಲ್
ನಗರದ ಎಪಿಎಂಸಿ ಮುಂಭಾಗದಲ್ಲಿ ಇಂದು ಸಂಜೆ ಎತ್ತಿನ ಬಂಡಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಕೃಷಿ ಸಚಿವರು, ಹಾನಗಲ್ ಚುನಾವಣೆಗೆ ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಇರೋದು ಸಹಜ. ಆದ್ರೆ, ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಉಪಚುನಾವಣೆಯಲ್ಲಿ ನಾವು ಗೆಲ್ಲೋದು ಬಹುತೇಕ ಖಚಿತ ಎಂದು ಹೇಳಿದರು.
ಬಿ ವೈ ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಪಾಟೀಲ್ ಅವರು, ವರಿಷ್ಠರು ಯಾರನ್ನು ಅಭ್ಯರ್ಥಿ ಮಾಡ್ತಾರೋ ಅವರನ್ನು ಗೆಲ್ಲಿಸಲಾಗುವುದು. ಮಾಧ್ಯಮ ಸೇರಿದಂತೆ ಕೆಲವರಿಗೆ ವಿಜಯೇಂದ್ರ ಮೇಲೆ ಬಹಳ ಪ್ರೀತಿ ಇದೆ. ಹೀಗಾಗಿ, ಅವರ ಹೆಸರು ಈ ರೀತಿ ತೇಲಿ ಬರುತ್ತಿರಬಹುದು ಎಂದರು.
ಎತ್ತಿನ ಬಂಡಿ ಸ್ಪರ್ಧೆ :ಕೃಷಿ ಇಲಾಖೆ ಎತ್ತಿನ ಬಂಡಿ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ಉತ್ತಮ ಅಲಂಕಾರವಾಗಿ ಬಂಡಿಯನ್ನು ಸಿಂಗಾರ ಮಾಡಿದವರಿಗೆ ಪ್ರಥಮ ಬಹುಮಾನ 15 ಸಾವಿರ ರೂ., ದ್ವಿತೀಯ ಬಹುಮಾನ 10 ಸಾವಿರ ರೂ., ತೃತೀಯ ಬಹುಮಾನ 5 ಸಾವಿರ ರೂ. ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಸುಮಾರು 75 ಎತ್ತಿನ ಬಂಡಿಗಳು ಭಾಗಹಿಸಿದ್ದವು.